ಅರ್ಜುನ್ ಗೌಡ ಟ್ರೇಲರ್ ರಿಲೀಸ್

ಅರ್ಜುನ್ ಗೌಡ ಟ್ರೇಲರ್ ರಿಲೀಸ್

ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಅದ್ಧೂರಿ ಚಿತ್ರಗಳನ್ನು ನಿರ್ಮಿಸಿ ಹೆಸರಾದ ರಾಮು ಫಿಲಂಸ್ ಸಂಸ್ಥೆಯ ಪ್ರಜ್ವಲ್ ದೇವರಾಜ್ ನಾಯಕನಾಗಿರುವ ‘ಅರ್ಜುನ್ ಗೌಡ’ ಚಿತ್ರದ ಟ್ರೇಲರ್ ಏ.೧೦ಕ್ಕೆ ಬಿಡುಗಡೆಯಾಗಲಿದೆ. ಆಯಕ್ಷನ್ ಕಥಾಹಂದರವನ್ನು ಹೊಂದಿರುವ  ಮೈನವಿರೇಳಿಸುವ ಸಾಹಸ ಸನ್ನಿವೇಶಗಳಿರುವ ಈ ಚಿತ್ರ ಟ್ರೇಲರ್ ಆನಂದ್ ಆಡಿಯೋ ಯೂಟ್ಯೂಬ್ ಚಾನಲ್ ಮೂಲಕ ಬಿಡುಗಡೆಯಾಗಲಿದೆ. ಚಿತ್ರ ಸದ್ಯದಲ್ಲೇ ತೆರೆಗೆ ಬರಲಿದ್ದು, ಸೆನ್ಸಾರ್ ಮಂಡಳಿ ಯು/ಎ ಪ್ರಮಾಣಪತ್ರ ನೀಡಿದೆ. ಇನ್‌ಸ್ಪೆಕ್ಟರ್ ವಿಕ್ರಂ ಯಶಸ್ಸಿನ ಬೆನ್ನಲ್ಲೇ ಪ್ರಜ್ವಲ್ ದೇವರಾಜ್ ಮತ್ತೊಂದು ಚಿತ್ರದ ಮುಖೇನ ತೆರೆಯ ಮೇಲೆ ಬರಲು ಸಜ್ಜಾಗಿದ್ದಾರೆ.ಲಕ್ಕಿ ಶಂಕರ್ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರದಲ್ಲಿ ಏಳು ಸಾಹಸ ಸನ್ನಿವೇಶಗಳಿವೆ. ಮಾಸ್ ಮಾದ ಸಾಹಸ ಸಂಯೋಜನೆಯಲ್ಲಿ ಇವು ಮೂಡಿ ಬಂದಿವೆ.