ಆಗ ದಿಯಾ ಈಗ ರಿಯಾ

ಆಗ ದಿಯಾ ಈಗ  ರಿಯಾ


ಳೆದ ವರ್ಷ ’ದಿಯಾ’ ಚಿತ್ರವು ಯಶಸ್ಸು ಕಂಡ ಬೆನ್ನಲ್ಲೇ ಹೊಸಬರ ದ ರೆಡ್ ರಿವೇಂಜ್ ಎಂಬ ಅಡಿಬರಹವಿರುವ ರಿಯಾ’ ಸಿನಿಮಾವೊಂದು ಸದ್ದಿಲ್ಲದೆ ಬಿಡುಗಡೆಗೆ ಸಿದ್ದಗೊಂಡಿದೆ.
ಆಂಧ್ರ ಮೂಲದ ಶಿಕ್ಷಕಿ ವಿಜಯಾನರೇಶ್ ನಿರ್ದೇಶಕಿಯಾಗಿ ಗುರುತಿಸಿಕೊಂಡು, ಚಿತ್ರಕ್ಕೆ ಕತೆ,ಚಿತ್ರಕತೆ ಬರೆದಿದ್ದಾರೆ. ಹಾರರ್, ಸಸ್ಪೆನ್ಸ್ ಥ್ರಿಲ್ಲರ್ ಹಾಗೂ ಸೆಂಟಿಮೆಂಟ್‌ಗಳಿಂದ ಕೂಡಿದ್ದು ನೋಡುಗರಿಗೆ ಹೊಸತನದ ಅನುಭವಗಳನ್ನು ಕೊಡುತ್ತದೆ. ಪತ್ನಿಯ ಆಸೆಯನ್ನು ಪೂರೈಸಲು ಕನಿಗೊಂಡನರೇಶ್ ನಿರ್ಮಾಣ ಮಾಡಿದ್ದಾರೆ. ಕಲಾವಿದರುಗಳನ್ನು ಅಡಿಷನ್ ಮೂಲಕ ಆಯ್ಕೆ ಮಾಡಲಾಗಿದೆ. ತಾರಗಣದಲ್ಲಿ ಕಾರ್ತಿಕ್‌ವರ್ಣೇಕರ್, ಸಾವಿತ್ರಿ, ಅನನ್ಯಾ, ವಿಕಾಸ್, ವಿಲಾಸ್‌ಕುಲಕರ್ಣೀ, ಆರ್ಗವಿರಾಯ್, ಸುಧೀರ್, ರಣ್ವೀರ್, ಶ್ವೇತಾ, ರೋಹಿಣಿ, ರಾಜ್‌ಉದಯ್, ನಾಗಭೂಷಣ್, ನಾಗರತ್ನ ಮುಂತಾದವರ ಅಭಿನಯವಿದೆ.
ಎರಡು ಹಾಡುಗಳಿಗೆ ಹೇಮಂತ್‌ಕುಮಾರ್ ಸಂಗೀತ, ಸುರೇಶ್‌ಅಚ್ಚು,  ಛಾಯಾಗ್ರಹಣ, ಎ.ಟಿ.ರವೀಶ್ ಹಿನ್ನಲೆ ಶಬ್ದ, ಶ್ರೀಜವಳಿ ಸಂಕಲನ, ತೂಫಾನ್ ಮಾಸ್ಟರ್-ಸಂತೋಷ್ ಸಾಹಸ, ಬ್ಲೂಸ್ಟಾರ್ ಸಂತೋಷ್-ರಘು-ಪುಟ್ಟರಾಜು ನೃತ್ಯವಿದೆ. ಪ್ರಚಾರದ ಮೊದಲ ಹಂತವಾಗಿ ರೇಣುಕಾಂಬ ಪ್ರಿವ್ಯೂ ಟಾಕೀಸ್‌ದಲ್ಲಿ ಆಡಿಯೋ ಅನಾವರಣ ಕಾರ್ಯಕ್ರಮ ನಡೆಯಿತು. ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಕೃಷ್ಣೆಗೌಡ, ಹಿರಿಯ ನಟ ಬ್ಯಾಂಕ್ ಜನಾರ್ಧನ್ ಮುಂತಾದವರು ಆಗಮಿಸಿ ತಂಡಕ್ಕೆ ಶುಭ ಹಾರೈಸಿದರು.