ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲೂ ಜನೌಷಧ ಕೇಂದ್ರ: ಸಚಿವ ಡಿ.ವಿ. ಸದಾನಂದಗೌಡ

ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲೂ ಜನೌಷಧ ಕೇಂದ್ರ: ಸಚಿವ ಡಿ.ವಿ. ಸದಾನಂದಗೌಡ

ಬೆಂಗಳೂರು: ಜನ ಸಾಮಾನ್ಯರ ಅನುಕೂಲಕ್ಕಾಗಿ ದೇಶದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲೂ ಜನೌಷಧ ಕೇಂದ್ರ ತೆರೆಯಲಾಗುವುದು ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ. ಸದಾನಂದಗೌಡ ಹೇಳಿದರು.
ನಾಗರಬಾವಿಯಲ್ಲಿ ಜನೌಷಧಿ ಮಳಿಗೆ ಉದ್ಘಾಟಿಸಿ ಮಾತನಾಡಿದ ಅವರು, ’ಆಸ್ಪತ್ರೆಗಳಿಗೆ ಬರುವ ರೋಗಿಗಳಿಗೆ ಅದರಲ್ಲೂ ಬಡವರಿಗೆ ಜನೌಷಧಿಯನ್ನೇ ವೈದ್ಯರು ಬರೆದುಕೊಡಬೇಕು’ ಎಂದು ಮನವಿ ಮಾಡಿದರು.
’ಜನೌಷಧಿಯೂ ಬ್ರಾಂಡೆಡ್ ಔಷಧಗಳಷ್ಟೇ ಗುಣಮಟ್ಟದ್ದು. ಆದರೆ, ದರ ಕಡಿಮೆ. ಉದಾಹರಣೆಗೆ ಮಧುಮೇಹ, ರಕ್ತದೊತ್ತಡ ಮುಂತಾದ ಖಾಯಿಲೆಗಳಿಗೆ ಸಾಮಾನ್ಯ ಔಷಧ ಅಂಗಡಿಗಳಲ್ಲಿ ಔಷಧ ಖರೀದಿಸಬೇಕೆಂದರೆ ತಿಂಗಳಿಗೆ ?೨,೫೦೦ ರಿಂದ ?೩ ಸಾವಿರ ವೆಚ್ಚವಾಗುತ್ತದೆ. ಇದೇ ಔಷಧ ಜನೌಷಧ ಕೇಂದ್ರಗಳಲ್ಲಿ ?೨೫೦ರಿಂದ ?೩೦೦ರೊಳಗೆ ಸಿಗಲಿದೆ’ ಎಂದರು.