ಕಾಜಲ್ ಹೋಯ್ತು ಬರ್ಕ್ಲಿ ಬಂತು

ಕಾಜಲ್ ಹೋಯ್ತು ಬರ್ಕ್ಲಿ ಬಂತು


ಳೆದ ೨೦೧೮ರಲ್ಲಿ ’ಕಾಜಲ್’ ಎನ್ನುವ ಹೆಸರಿನಲ್ಲಿ ಸೆಟ್ಟೇರಿದ್ದ ಸಿನಿಮಾದ ಹೆಸರನ್ನು ಬದಲಾಯಿಸಿ ಬರ್ಕ್ಲಿ’  ಎಂಬ ಶೀರ್ಷಿಕೆಯನ್ನು ಇಡಲಾಗಿದೆ.
ದರ್ಶನ್ ನಟನೆಯ ’ಕರಿಯ ’ ನಿರ್ಮಾಣ ಮಾಡಿರುವ ಆನೇಕಲ್ ಬಾಲ್‌ರಾಜ್ ಮಗನ ಸಲುವಾಗಿ ಚಿತ್ರಕ್ಕೆ ಹಣ ಹೂಡುತ್ತಿದ್ದಾರೆ. ನಿರ್ದೇಶಕ ಸುಮನ್‌ಕ್ರಾಂತಿ ಹೇಳುವಂತೆ ಇದೊಂದು ಮ್ಯೂಜಿಕಲ್ ಪ್ರೇಮ ಕತೆಯಾಗಿದೆ.  ಟೀನೇಜ್‌ಗೆ ಹೇಳಿ ಮಾಡಿಸಿದಂತೆ, ಹೊಸ ವಿಷಯಗಳನ್ನು ಸೇರಿಸಿಕೊಂಡು ಅದಕ್ಕೊಂದು ಸುಂದರ ಪ್ರೇಮ ಕಥನವನ್ನು ಅಳವಡಿಸಲಾಗಿದೆ.   
ಗಣಪ, ಕರಿಯ-೨ ಚಿತ್ರಗಳಲ್ಲಿ ನಟಿಸಿದ್ದ ಸಂತೋಷ್‌ಬಾಲರಾಜ್ ನಾಯಕ.  ಧೂಮಪಾನ ಆರೋಗ್ಯಕ್ಕೆ ಹಾನಿಕರ ಎಂಬುದು ಚಿತ್ರಮಂದಿರದಲ್ಲಿ ಬರುವಾಗ ಅದರಲ್ಲೊಂದು ಪುಟ್ಟ ಮಗು ಕಾಣಿಸುತ್ತದೆ. ಸದರಿ ಮಗುವು  ಬೆಳೆದು ಸಿಮ್ರಾನ್‌ನಾಟೇಕರ್ ಹೆಸರಿನಲ್ಲಿ ಅನಿವಾಸಿ ಭಾರತೀಯಳಾಗಿ ಹಳ್ಳಿಗೆ ಬಂದಾಗ ಪ್ರೀತಿಯಲ್ಲಿ ಬೀಳುವ ನಾಯಕಿ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಸಂಗೀತ ಜ್ಯೂಡಾಸ್ಯಾಂಡಿ, ಛಾಯಾಗ್ರಹಣ ಕೃಷ್ಣಕುಮಾರ್-ಎನ್.ಎಂ.ಸೂರಿ, ಸಂಕಲನ ಅಮಿತ್, ಸಾಹಸ ಡಿಫರೆಂಟ್‌ಡ್ಯಾನಿ, ನೃತ್ಯ ಮುರಳಿ ಅವರದಾಗಿದೆ. ತಾರಗಣದಲ್ಲಿ ಚರಣ್‌ರಾಜ್, ಶೃತಿ, ಬಲರಾಜವಾಡಿ, ಬುಲೆಟ್‌ಪ್ರಕಾಶ್ ಮುಂತಾದವರು ನಟಿಸಿದ್ದಾರೆ. ಸಿನಿಮಾದ ಶೂಟಿಂಗ್ ಮುಗಿದು ಚಿತ್ರೀಕರಣೋತ್ತರ ಕೆಲಸಗಳಲ್ಲಿ ತಂಡವು ಬ್ಯುಸಿ ಇದೆ.