ಚೆಲ್ಲಗುರ್ಕಿ ಯೆರ್ರಿತಾತ ಜೀವನ ಚರಿತ್ರೆ

ಚೆಲ್ಲಗುರ್ಕಿ ಯೆರ್ರಿತಾತ ಜೀವನ ಚರಿತ್ರೆ

ಶಿರಡಿಸಾಯಿಬಾಬ, ಸಿದ್ದಲಿಂಗೇಶ್ವರ ಇನ್ನು ಹಲವು ಪುಣ್ಯ ಪುರುಷರ ಚರಿತ್ರೆಗಳು ಚಿತ್ರರೂಪದಲ್ಲಿ ಬಂದಿದ್ದು ಅವುಗಳ ಸಾಲಿಗೆ . ’ಚೆಲ್ಲಗುರ್ಕಿ ಯರ್ರಿತಾತ’ ಚಿತ್ರವು ಹೊಸ ಸೇರ್ಪಡೆಯಾಗಿದೆ.
ಬಳ್ಳಾರಿಯಿಂದ ೨೫ ಕಿ.ಮೀ, ಅನಂತಪುರದಿಂದ ೭೦ ಕಿ.ಮೀ ದೂರವಿರುವ ಚೆಲ್ಲಗುರ್ಕಿ ಸ್ಥಳಕ್ಕೆ ಯರ್ರಿತಾತ ೧೮೯೨ರಲ್ಲಿ ಪಾದಾರ್ಪಣೆ ಮಾಡಿ ೨೫ ವರ್ಷಗಳ ಕಾಲ ಜೀವನ ನಡೆಸಿ ೧೯೨೨ರಲ್ಲಿ ಜೀವಂತ ಸಮಾಧಿಯಾಗಿದ್ದಾರೆ. ಸದರಿ ತಾತನ ಪಾತ್ರವನ್ನು ಹಿರಿಯ ನಟ ಶ್ರೀನಿವಾಸಮೂರ್ತಿ ನಿಭಾಯಿಸುತ್ತಿದ್ದಾರೆ. ಹಾಗಂತ ಒಮ್ಮೆಗೆ ಬಣ್ಣ ಹಚ್ಚದೆ, ಗುರುಗಳು ಓಡಾಡಿದ, ನೆಲಸಿದ ಸ್ಥಳಗಳಲ್ಲಿ ತಂಗಿ, ಅಲ್ಲಿನ ಜನರೊಂದಿಗೆ ಬೆರತು ಮತ್ತಷ್ಟು ವಿಷಯಗಳನ್ನು ತಿಳಿದುಕೊಂಡು ಅವರಂತೆ ನಟಿಸಲು ತಾಲೀಮು ನಡೆಸಿರುವುದು ವಿಶೇಷ.
ಕರ್ನೂಲು, ಅನಂತಪುರ, ಕೊಪ್ಪಳ, ರಾಯಚೂರು, ಬಳ್ಳಾರಿ ಕಡೆಗಳಿಂದ ಜನರು ವಿಶೇಷ ದಿನಗಳಂದು ಸಮಾಧಿಗೆ ಭೇಟಿ ನೀಡಿ ಪೂಜೆ ಸಲ್ಲಿಸುವುದು ಉಂಟು. ನೈಜ ಸಾಧಕರ ಚಿತ್ರಗಳನ್ನು ನಿರ್ದೇಶಿಸುವುzರಲ್ಲಿ ಯಶಸ್ಸು ಕಂಡಿರುವ ಪುರುಷೋತ್ತಮ್ ಚಿತ್ರಕ್ಕೆ ಕತೆ,ಚಿತ್ರಕತೆ,ಸಂಭಾಷಣೆ ಬರೆದು ಆಕ್ಷನ್ ಕಟ್ ಹೇಳುತ್ತಿದ್ದಾರೆ.  ಮಹದೇವಯ್ಯ, ವಿಷ್ಣು ಇತರರೊಂದಿಗೆ ನಿರ್ದೇಶಕರು ಸಹ ನಿಮಾಣದಲ್ಲಿ  ಕೈ ಜೋಡಿಸಿದ್ದಾರೆ.