ದೇಶದಲ್ಲಿ ೪೦೯೫೨ ಹೊಸ ಸೋಂಕಿತರು

ದೇಶದಲ್ಲಿ ೪೦೯೫೨ ಹೊಸ ಸೋಂಕಿತರು

ನವದೆಹಲಿ : ಇದೀಗ ಭಾರತದಲ್ಲಿ ಮತ್ತೆ ಕೊರೊನಾ ಮಹಾಮಾರಿ ತನ್ನ ಅಟ್ಟಹಾಸವನ್ನು ಮುಂದುವರಿಸಿದೆ. 
ಕಳೆದ ೨೪ ಗಂಟೆಗಳ (ಶನಿವಾರ ಬೆಳಿಗ್ಗೆ ೮ ಗಂಟೆಗೆ ಮುಕ್ತಾಯ) ಅವಧಿಯಲ್ಲಿ ದೇಶದಲ್ಲಿ ೪೦,೯೫೩ ಪ್ರಕರಣಗಳು ದಾಖಲಾಗಿವೆ. 
ಇದು ಈ ವರ್ಷದ ಈ ವರೆಗಿನ ಹಾಗೂ ಕಳೆದ ೧೧೧ ದಿನಗಳ ಸರ್ವಾಧಿಕ ದೈನಂದಿನ ಸಂಖ್ಯೆಯಾಗಿದೆ. ಇದೇ ವೇಳೆ ಮಹಾರಾಷ್ಟ್ರ, ಪಂಜಾಬ್, ಕರ್ನಾಟಕ, ಗುಜರಾತ್, ಛತ್ತೀಸ್‌ಗಢಗಳಲ್ಲಿ ದೈನಂದಿನ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಒಟ್ಟು ಸಕ್ರಿಯ ಪ್ರಕರಣಗಳಲ್ಲಿ ಶೇ.೮೦ ರಷ್ಟು ಕೇಸುಗಳು ಈ ರಾಜ್ಯಗಳಲ್ಲೇ ಇವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ಫೆಬ್ರವರಿ ೧೫ ರಂದು ಕೇವಲ ೧.೩೫ ಲಕ್ಷಕ್ಕೆ ಇಳಿದಿದ್ದ ಸಕ್ರಿಯ ಕೊರೋನಾ ಪ್ರಕರಣಗಳ ಸಂಖ್ಯೆ ಇದೀಗ ೨,೮೮,೩೯೪ಕ್ಕೆ ಏರಿಕೆಯಾಗಿದೆ. ಸತತ ೧೦ ದಿನಗಳಿಂದ ದೇಶದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತಲ್ಲೇ ಇದ್ದು, ಇದು ಆತಂಕವನ್ನು ಹೆಚ್ಚಾಗುವಂತೆ ಮಾಡಿದೆ.
ಒಂದೇ ದಿನ ೪೦,೯೫೩ ಮಂದಿ ಸೋಂಕಿತರು ಪತ್ತೆಯಾಗುವುದರೊಂದಿಗೆ ದೇಶದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ ೧,೧೫,೫೫,೨೮೪ಕ್ಕೆ ಏರಿಕೆಯಾಗಿದೆ. ಜೊತೆಗೆ ೨೪ ಗಂಟೆಗಳಲ್ಲಿ ಬರೋಬ್ಬರಿ ೧೮೮ ಮಂದಿ ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದು, ಇದರೊಂದಿಗೆ ಸಾವಿನ ಸಂಖ್ಯೆ ೧,೫೯,೫೫೮ಕ್ಕೆ ಏರಿಕೆಯಾಗಿದೆ
ಈ ನಡುವೆ ಒಟ್ಟಾರೆ ೧,೧೫,೫೫,೨೮೪ ಮಂದಿ ಸೋಂಕಿತರ ಪೈಕಿ ನಿನ್ನೆ ಒಂದೇ ದಿನ ೨೩,೬೫೩ ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದು, ಇದರೊಂದಿಗೆ ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ ೧,೧೧,೦೭,೩೩೨ ಕ್ಕೆ ಏರಿಕೆಯಾಗಿದೆ.
ಭಾರತದಲ್ಲಿ ಒಂದೇ ದಿನ ೧೦,೬೦,೯೭೧ ಮಂದಿಯನ್ನು ಕೊರೋನಾ ಪರೀಕ್ಷೆಗೊಳಪಡಿಸಲಾಗಿದ್ದು, ಈವರೆಗೂ ದೇಶದಲ್ಲಿ ೨೩,೨೪,೩೧,೫೧೭ ಮಂದಿಯನ್ನು ಪರೀಕ್ಷೆಗೊಳಪಡಿಸಲಾಗಿದೆ ಎಂದು ಐಸಿಎಂಆರ್ ಮಾಹಿತಿ ನೀಡಿದೆ.