ಧ್ರುವ ಸರ್ಜಾ ಗರಂ

ಧ್ರುವ ಸರ್ಜಾ ಗರಂ

ಬೆಂಗಳೂರು:  ಕೊರೊನಾ ವೈರಸ್‌ನ ಎರಡನೇ ಅಲೆ ಭೀತಿ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಚಿತ್ರಮಂದಿರಗಳಲ್ಲಿ ಶೇ. ೫೦ರಷ್ಟು ಪ್ರೇಕ್ಷಕರಿಗೆ ಅವಕಾಶ ನೀಡಿರುವುದಕ್ಕೆ ಸ್ಯಾಂಡಲ್ ವುಡ್ ನಟ ಧ್ರುವ ಸರ್ಜಾ ಸರ್ಕಾರದ ವಿರುದ್ಧ ಗರಂ ಆಗಿದ್ದಾರೆ.
ಫೆ ೧ ರಿಂದ ೧೦೦ ಪರ್ಸೆಂಟ್ ಭರ್ತಿ ಪ್ರೇಕ್ಷಕರೊಂದಿಗೆ ದೇಶಾದ್ಯಂತ ಚಿತ್ರಮಂದಿರಗಳು ಓಪನ್‌ಗೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ನೀಡಿತ್ತು. ದರೆ ಇದೀಗ ಸಾರ್ವಜನಿಕರ ಹಿತದೃಷ್ಟಿಯಿಂದ ೨೮ನೇ ಫೆಬ್ರವರಿ ೨೦೨೧ರವರೆಗೆ ಸಿನಿಮಾ ಹಾಲ್‌ಗಳಲ್ಲಿ ಶೇ.೫೦  ಪ್ರೇಕ್ಷಕರಿಗೆ ಮಾತ್ರ ಅವಕಾಶ ಕಲ್ಪಿಸಲು ಸೂಚಿಸಲಾಗಿದೆ. ಈ ಬಗ್ಗೆ ರಾಜ್ಯ ಸರ್ಕಾರ ಅಧಿಕೃತ ಸುತ್ತೋಲೆ ಹೊರಡಿಸಿದೆ.
ರಾಜ್ಯ ಸರ್ಕಾರದ ಈ ನಿರ್ಧಾರಕ್ಕೆ ನಟ ಧ್ರುವ ಸರ್ಜಾ ಕಿಡಿಕಾರಿದ್ದು, ಮಾರ್ಕೆಟ್‌ನಲ್ಲಿ ಗಿಜಿಗಿಜಿ ಜನ, ಬಸ್‌ನಲ್ಲೂ ಫುಲ್ ರಶ್, ಚಿತ್ರಮಂದಿರಕ್ಕೆ ಮಾತ್ರ ಏಕೆ ಶೇ.೫೦ರಷ್ಟು ನಿರ್ಬಂಧ ಏಕೆ ಎಂದು ಪ್ರಶ್ನಿಸಿದ್ದಾರೆ.