ನೂತನ ಸಿಜೆಐಯಾಗಿ ಎನ್.ವಿ.ರಮಣ ನೇಮಕ

ನೂತನ ಸಿಜೆಐಯಾಗಿ ಎನ್.ವಿ.ರಮಣ ನೇಮಕ

ನವದೆಹಲಿ: ನಿರೀಕ್ಷೆಯಂತೆಯೇ ಸುಪ್ರೀಂಕೋರ್ಟ್‌ನ ಮುಂದಿನ ಮುಖ್ಯ ನ್ಯಾಯಮೂರ್ತಿಯನ್ನಾಗಿ (ಸಿಜೆಐ) ಎನ್‌ವಿ ರಮಣ ಅವರನ್ನು ನೇಮಿಸಲಾಗಿದೆ. 
ಹಾಲಿ ಸಿಜೆಐ ಶರದ್ ಅರವಿಂದ್ ಬೋಬ್ಡೆ ಅವರ ಅಧಿಕಾರಾವಧಿ ಏ.೨೩ರಂದು ಮುಕ್ತಾಯವಾಗಲಿರುವ ಹಿನ್ನೆಲೆಯಲ್ಲಿ ಅವರ ಉತ್ತರಾಧಿಕಾರಿಯನ್ನಾಗಿ ಎನ್‌ವಿ ರಮಣ ಅವರನ್ನು ನೇಮಕ ಮಾಡಲಾಗಿದೆ.
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಮಂಗಳವಾರ ಈ ಸಂಬಂಧ ಆದೇಶ ಹೊರಡಿಸಿದ್ದು, ಏ.೨೪ರಿಂದ ಜಾರಿಯಾಗುವಂತೆ
 ಸುಪ್ರೀಂಕೋರ್ಟ್‌ನ ಮುಂದಿನ ಮುಖ್ಯ ನ್ಯಾಯಮೂರ್ತಿಯನ್ನಾಗಿ ಎನ್‌ವಿ ರಮಣ ಅವರನ್ನು ನೇಮಕ ಮಾಡಲಾಗಿದೆ.
ಮುಂದಿನ ಸಂಭಾವ್ಯ ಸಿಜೆಐ: ಆಂಧ್ರಪ್ರದೇಶದ ಎನ್‌ವಿ ರಮಣ ವ್ಯಕ್ತಿಚಿತ್ರ
ಆಂಧ್ರಪ್ರದೇಶ ಮೂಲದ ನೂತಲಪತಿ ವೆಂಕಟ ರಮಣ ಅವರು ಸುಪ್ರೀಂಕೋರ್ಟ್‌ನ ೪೮ನೇ ಮುಖ್ಯ ನ್ಯಾಯಮೂರ್ತಿಯಾಗಲಿದ್ದು, ಅವರು ೨೦೨೨ರ ಆಗಸ್ಟ್ ೨೬ರಂದು ನಿವೃತ್ತರಾಗಲಿದ್ದಾರೆ.
 ಮುಖ್ಯ ನ್ಯಾಯಮೂರ್ತಿ ಎಸ್‌ಎ ಬೋಬ್ಡೆ ಅವರು ಸಂಪ್ರದಾಯದಂತೆ ತಮ್ಮ ನಂತರದ ಅತಿ ಹಿರಿಯ ನ್ಯಾಯಮೂರ್ತಿ ಎನ್‌ವಿ ರಮಣ ಹೆಸರನ್ನು ಮುಂದಿನ ಸಿಜೆಐ ಹುದ್ದೆಗೆ ಕಳೆದ ತಿಂಗಳು ಶಿಫಾರಸು ಮಾಡಿದ್ದರು.
 ಈ ಶಿಫಾರಸಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅನುಮೋದನೆ ನೀಡಿದ್ದಾರೆ. ದೆಹಲಿ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ
 ಆಗಿದ್ದ ಎನ್‌ವಿ ರಮಣ ಅವರನ್ನು ೨೦೧೪ರ ಫೆಬ್ರವರಿ ೧೭ರಂದು ಸುಪ್ರೀಂಕೋರ್ಟ್‌ಗೆ ಪದೋನ್ನತಿ ಮಾಡಲಾಗಿತ್ತು.
ಅಂದಹಾಗೇ ಆಗಸ್ಟ್ ೨೭, ೧೯೫೭ ರಂದು ಜನಿಸಿರುವ ನ್ಯಾಯಮೂರ್ತಿ ಎನ್.ವಿ. ರಮಣ ಅವರ ಅಧಿಕಾರಾವಧಿ ೨೦೨೨ರ ಆಗಸ್ಟ್ ೨೬ರವರೆಗೆ ಇರಲಿದ್ದಾರೆ.