ಪೊಲೀಸರ ಗುಂಡೇಟು

ಪೊಲೀಸರ ಗುಂಡೇಟು

ಬೆಂಗಳೂರು :  ಇಂದು ಬೆಳ್ಳಂಬೆಳಗ್ಗೆ ಮತ್ತೆ ಗುಂಡಿನ ಸದ್ದು ಕೇಳಿಬಂದಿದೆ. 
ರೌಡಿಶೀಟರ್ ಜೊತೆ ಗುರುತಿಸಿಕೊಂಡಿದ್ದ ಆರೋಪಿ ಪ್ರವೀಣ್ (೨೨) ಮೇಲೆ ಕೊಲೆ ಪ್ರಯತ್ನದ ಆರೋಪವಿತ್ತು. ಆತನನ್ನು ಬಂಧಿಸಲು ಹೋದಾಗ ಇಂದು ಮುಂಜಾನೆ ಮಚ್ಚಿನಿಂದ ಹಲ್ಲೆಗೆ ಯತ್ನಿಸಿದ್ದ. ಈ ವೇಳೆ ಪೊಲೀಸರು ಆತನ ಕಾಲಿಗೆ ಪೀಣ್ಯ ಪೊಲೀಸ್ ಠಾಣೆ ಸಬ್ ಇನ್ಸ್‌ಪೆಕ್ಟರ್ ಮಾಯಣ್ಣ ಬಿರಾಣೆ ಗುಂಡು ಹಾರಿಸಿದ್ದಾರೆ.  ಡಕಾಯಿತಿ ಹಾಗೂ ಕೊಲೆಗೆ ಸಂಚು ರೂಪಿಸಿದ್ದ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಲು ಪೊಲೀಸರು ಇಂದು ಮುಂಜಾನೆ ತೆರಳಿದ್ದರು. ತಿಪ್ಪೇನಹಳ್ಳಿಯ ಬಳಿ ಆರೋಪಿಯಿದ್ದು, ಆತನನ್ನು ಬಂಧಿಸಲು ತೆರಳಿದಾಗ ಹೆಡ್ ಕಾನ್‌ಸ್ಟೇಬಲ್ ರಂಗಸ್ವಾಮಿ ಮೇಲೆ ಆರೋಪಿ ಪ್ರವೀಣ್ ಮಚ್ಚಿನಿಂದ ಹಲ್ಲೆಗೆ ಯತ್ನಿಸಿದ್ದ. ಈ ವೇಳೆ ಆತ್ಮರಕ್ಷಣೆಗೆ ಆರೋಪಿ ಪ್ರವೀಣ್ ಕಾಲಿಗೆ ಗುಂಡು ಹಾರಿಸಿದ ಸಬ್ ಇನ್ಸ್‌ಪೆಕ್ಟರ್ ಆತನನ್ನು ಬಂಧಿಸಿದ್ದಾರೆ. ರಾಜಗೋಪಾಲನಗರ, ಪೀಣ್ಯ ಪೊಲೀಸ್ ಠಾಣೆಯಲ್ಲಿ ಪ್ರವೀಣ್ ವಿರುದ್ಧ ಹಲ್ಲೆ, ಡಕಾಯಿತಿ ಕೇಸ್‌ಗಳು ದಾಖಲಾಗಿವೆ. ರೌಡಿಶೀಟರ್ ಅನಿಲ್ ಜೊತೆ ಗುರುತಿಸಿಕೊಂಡಿದ್ದ ಆರೋಪಿ ಪ್ರವೀಣ್ ಇದೀಗ ಗುಂಡೇಟಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಅನಿಲ್ ಹಾಗೂ ಮತ್ತೋರ್ವ ರೌಡಿಶೀಟರ್ ಆಂಧ್ರಹಳ್ಳಿ ಅಭಿ ನಡುವೆ ವೈಮನಸ್ಸಿತ್ತು. ಹೀಗಾಗಿ, ಅಭಿ ಹತ್ಯೆಗೆ ಸಂಚು ರೂಪಿಸಿದ್ದ ಅನಿಲ್‌ನ ಗ್ಯಾಂಗ್ ಮೇಲೆ ಜ.೧೬ರಂದು ತಿಪ್ಪೇನಹಳ್ಳಿ ಬಳಿ ಪೀಣ್ಯ ಪೊಲೀಸರು ದಾಳಿ ನಡೆಸಿದ್ದರು. ಆ ವೇಳೆ ಮಾರಕಾಸ್ತ್ರಗಳು ಹಾಗೂ ಗಾಂಜಾ ಸಹಿತ ಮೂವರು ಆರೋಪಿಗಳನ್ನು ಬಂಧಿಸಿದ್ದರು. ಈ ಘಟನೆಯಲ್ಲಿ ೬ ಜನ ಆರೋಪಿಗಳು ಪರಾರಿಯಾಗಿದ್ದರು. ಆ.೧೭ರಂದು ಇಬ್ಬರು ಆರೋಪಿಗಳನ್ನು ಬಂಧಿಸಿದ್ದರು. ಇಂದು ಬೆಳಿಗ್ಗೆ ಆರೋಪಿ ಪ್ರವೀಣನ ಬಂಧನಕ್ಕೆ ತೆರಳಿದ್ದ ವೇಳೆ ಆತನ ಕಾಲಿಗೆ ಗುಂಡು ಹಾರಿಸಲಾಗಿದೆ.