ಬಿಗ್ ಬಿಗೆ ಕಣ್ಣಿನ ಶಸ್ತ್ರಚಿಕಿತ್ಸೆ

ಬಿಗ್ ಬಿಗೆ ಕಣ್ಣಿನ ಶಸ್ತ್ರಚಿಕಿತ್ಸೆ

ಮುಂಬೈ : ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಅವರು ಕಣ್ಣಿನ ಶಸ್ತ್ರಚಿಕಿತ್ಸೆಗೊಳಗಾಗಿದ್ದು, ೨೪ ಗಂಟೆ ಬಳಿಕ ಮನೆಗೆ ಹಿಂತಿರುಗಲಿದ್ದಾರೆಂದು ಮೂಲಗಳು ತಿಳಿಸಿದೆ.
ಕೇವಲ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ಅಷ್ಟೇ. ಮುಂದಿನ ೨೪ ಗಂಟೆಗಳಲ್ಲಿ ಅಮಿತಾಬ್ ಬಚ್ಚನ್ ಮನೆಗೆ ಬರಲಿದ್ದಾರೆಂದು ನಟನ ಆಪ್ತ ಮೂಲವೊಂದು ಬಹಿರಂಗಪಡಿಸಿದೆ.
೭೮ ವರ್ಷದ ಅಮಿತಾಬ್ ಬಚ್ಚನ್ ಇತ್ತೀಚೆಗೆ ಕೋವಿಡ್‌ನಿಂದ ಬಹಳ ದಿನಗಳವರೆಗೂ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆದು ಮತ್ತೆ ಚಿತ್ರೀಕರಣಗಳಲ್ಲಿ ಭಾಗಿಯಾಗಿದ್ದರು. ವಿಕಾಸ್ ಬಾಹ್ಲ್ ಅವರ ಮುಂದಿನ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗುತ್ತಿರುವುದಾಗಿ ಮಾಹಿತಿ ನೀಡಿದ್ದರು.