ಬಿಸಿಯೂಟ ಈ ಬಾರಿ ಕಟ್.! ಮನೆ ಬಾಗಿಲಿಗೆ ಬರಲಿದೆ ಫುಡ್ ಕಿಟ್

ಬಿಸಿಯೂಟ ಈ ಬಾರಿ ಕಟ್.! ಮನೆ ಬಾಗಿಲಿಗೆ ಬರಲಿದೆ ಫುಡ್ ಕಿಟ್

ಬೆಂಗಳೂರು : ರಾಜ್ಯದಲ್ಲಿ ಕಾಲೇಜುಗಳ ಆರಂಭದ ನಂತ್ರ, ಶಾಲಾ-ಕಾಲೇಜು ಯಾವಾಗ ಆರಂಭಗೊಳ್ಳಲಿದೆ ಎಂಬುದು ತೀವ್ರ ಕುತೂಹಲ ಮೂಡಿಸಿತ್ತು. ಇಂತಹ ಕುತೂಹಲಕ್ಕೆ ತೆರೆ ಬಿದ್ದಿದ್ದು, ಕೊನೆಗೂ ರಾಜ್ಯದಲ್ಲಿ ಶಾಲಾ-ಕಾಲೇಜುಗಳ ಪುನರಾರಂಭದ ಬಗ್ಗೆ ಮುಹೂರ್ತ ಫಿಕ್ಸ್ ಮಾಡಲಿದ್ದಾರೆ. ಜನವರಿ ೧ರಿಂದ ೧೦ನೇ ತರಗತಿ ಹಾಗೂ ೧೨ನೇ ತರಗತಿ ಆರಂಭಕ್ಕೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ನಡೆದಂತ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿರುವುದಾಗಿ ಘೋಷಿಸಿದ್ದಾರೆ.
ಇದೇ ಸಭೆ ಬಳಿಕ ವೇಳೆ ಮಾತನಾಡಿ, ಸಚಿವ ಸಚಿವ ಸುರೇಶ್ ಕುಮಾರ್ ಬೋರ್ಡ್ ಪರೀಕ್ಷೆ ಇರುವುದರಿಂದ ಎಸ್?ಎಸ್?ಎಲ್?ಸಿ ಮತ್ತು ೧೨ ನೇ ತರಗತಿಗಳನ್ನು ೨೦೨೧ರ ಜನವರಿ ೧ರಿಂದ ಪ್ರಾರಂಭಿಸಲಾಗುತ್ತದೆ. ಆದರೆ ವಿದ್ಯಾರ್ಥಿಗಳು ಶಾಲೆಗೆ ಬರೋದು ಕಡ್ಡಾಯವಲ್ಲ, ಇದಲ್ಲದೇ ಜನವರಿ ೧ರಿಂದ ವಿದ್ಯಾಗಮ ಕೂಡ ನಡೆಲಿದ್ದು, ಇದು . ಶಾಲೆ ಆವರಣದಲ್ಲೇ ವಾರಕ್ಕೆ ಮೂರುದಿನ ೬ರಿಂದ ೯ನೇ ತರಗತಿ ನೀಡಲಾಗುತ್ತದೆ ಅಂಥ ತಿಳಿಸಿದರು.ಮಧ್ಯಾಹ್ನದ ಬಿಸಿಯೂಟ ಕೊಡುವುದು ಸಾಧ್ಯವಿಲ್ಲ. ಹೀಗಾಗಿ ಮನೆಗಳಿಗೆ ಫುಡ್ ಕಿಟ್?ಗಳನ್ನು ನೀಡುತ್ತೇವೆ ಅಂತ ಹೇಳಿದರು. ಪರೀಕ್ಷೆ ಬಗ್ಗೆ ಪರಿಸ್ಥಿತಿ ನೋಡಿಕೊಂಡು ಉಳಿದ ತರಗತಿಗಳ ಬಗ್ಗೆ ಹಾಗೂ ಪಠ್ಯಕ್ರಮ ಪರಿಷ್ಕರಣೆ ಮಾಡಲಾಗುವುದು ಅಂತ ಹೇಳಿದರು.
ಜನವರಿ ೧ರಿಂದ ೧೦ ಮತ್ತು ೧೨ನೇ ತರಗತಿ ಆರಂಭಿಸಲಾಗುತ್ತಿದೆ. ಜನವರಿ ೧ರಿಂದ ೬ ರಿಂದ ೯ನೇ ತರಗತಿ ವಿದ್ಯಾರ್ಥಿಳಿಗೆ ವಿದ್ಯಾಗಮ ಕಾರ್ಯಕ್ರಮದ ಮೂಲಕ ಶೈಕ್ಷಣಿಕ ಚಟುವಟಿಕೆ ಮುಂದುವರೆಸಲು ನಿರ್ಧರಿಸಿದ್ದಾರೆ ಎಂಬುದಾಗಿ ತಿಳಿಸಿದ್ದಾರೆ. ಈ ಮೂಲಕ ಜನವರಿ ೧ರಿಂದ ರಾಜ್ಯದಲ್ಲಿ ಶಾಲಾ-ಕಾಲೇಜು ಆರಂಭಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ.