ಮೃಗಾಲಯ-ಸಫಾರಿಗಳಿಗೆ ಹೋಗದಿರಿ..

ಮೃಗಾಲಯ-ಸಫಾರಿಗಳಿಗೆ ಹೋಗದಿರಿ..

ಬೆಂಗಳೂರು : ಮೃಗಾಲಯ ಹಾಗೂ ಸಫಾರಿಗಳಿಗೆ ಹೋಗುವುದನ್ನು ನಿಲ್ಲಿಸಿ. ಅವುಗಳು ಮನುಷ್ಯರನ್ನು ನೋಡಲು ಇಷ್ಟ ಪಡೋದಿಲ್ಲ ಎಂದು ತಮ್ಮ ಇನ್‌ಸ್ಟಾಗ್ರಾಂ ಸ್ಟೋರೀಸ್‌ನಲ್ಲಿ ನಟಿ ರಮ್ಯಾ ಮನವಿ ಮಾಡಿದ್ದಾರೆ.
ಇತ್ತೀಚೆಗಷ್ಟೆ ತಮಿಳುನಾಡಿನಲ್ಲಿ ಆನೆಯೊಂದಕ್ಕೆ ಕಿಡಿಗೇಡಿಗಳು ಬೆಂಕಿ ಇಟ್ಟಿದ್ದರು. ಅದರ ಪರಿಣಾಮದಿಂದ ಆನೆ ಮೃತಪಟ್ಟಿದ್ದು, ಈ ಘಟನೆಯನ್ನು ಖಂಡಿಸಿ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲೇ ಆರೋಪಿಗಳನ್ನು ಬಂಧಿಸುವಂತೆ ಅಭಿಯಾನ ಆರಂಭಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ರಮ್ಯಾ ಸಹ ಈ ವಿಷಯವಾಗಿಯೇ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.
ಹೆಣ್ಣಾನೆಯ ಸಾವಿಗೆ ಕಂಬನಿ ಮಿಡಿದಿರುವ ನಟಿ ರಮ್ಯಾ, ವನ್ಯಜೀವಿಗಳ ಮೇಲೆ ಮನುಷ್ಯ ಯಾವೆಲ್ಲ ರೀತಿ ದೌರ್ಜನ್ಯವೆಸಗುತ್ತಿದ್ದಾನೆ ಎಂದು ವಿವರಿಸುತ್ತಾ ಬೇಸರ ವ್ಯಕ್ತಪಡಿಸಿದ್ದಾರೆ. ವನ್ಯಜೀವಿಗಳ ಮನೆ, ಜಾಗ, ಆಹಾರ, ನೀರು ಎಲ್ಲವನ್ನೂ ಕಿತ್ತುಕೊಳ್ಳುತ್ತಿರುವ ಮನುಷ್ಯ, ಅವುಗಳನ್ನು ನೆಮ್ಮದಿಯಾಗಿ ಇರಲು ಬಿಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಎಲ್ಲ ಸರಿಯಾಗಿದೆ ಅನ್ನೋ ಭ್ರಮೆಯಲ್ಲಿ ಜೀವಿಸುವುದನ್ನು ಬಿಡಬೇಕು. ಇಡೀ ಭೂಮಂಡಲವನ್ನೇ ಹಾಳು ಮಾಡುತ್ತಿರುವ ನಾವು, ಸತ್ಯವನ್ನು ಅರಿತುಕೊಂಡು ಇನ್ನಾದರೂ ಎಚ್ಚೆತ್ತುಕೊಳ್ಳಬೇಕಾಗಿದೆ. ಇನ್ನು ವನ್ಯಜೀವಿಗಳನ್ನು ಅವುಗಳ ಪಾಡಿಗೆ ಇರಲು ಬಿಡಬೇಕು. ಅವುಗಳಿಗೆ ಬೇಕಾಗಿರುವುದು ಅವರ ಜಾಗ, ಪ್ರೀತಿ ಹಾಗೂ ಗೌರವ. ಅದನ್ನು ಕೊಟ್ಟರೆ ಸಾಕು. ಇನ್ನು ರಮ್ಯಾ ಕಳೆದ ಒಂದು ವರ್ಷದಿಂದ ಸಸ್ಯಾಹಾರಿಯಾಗಿ ಬದಲಾಗಿದ್ದಾರೆ. ಅವರಿಗೆ ತಮ್ಮ ಜೀವನವನ್ನು ಖುಷಿಯಿಂದ ಸಾಗಿಸಲು ಮಾಂಸಾಹಾರದ ಅಗತ್ಯ ಇಲ್ಲ ಎನ್ನುವುದು ಅರಿವಾಗಿದೆಯಂತೆ.