ವಿಶ್ವಖ್ಯಾತಿ ಇಸ್ರೇಲ್ ವಿಜ್ಞಾನಿಯಿಂದ ಅಚ್ಚರಿಯ ಮಾಹಿತಿ

ವಿಶ್ವಖ್ಯಾತಿ ಇಸ್ರೇಲ್ ವಿಜ್ಞಾನಿಯಿಂದ ಅಚ್ಚರಿಯ ಮಾಹಿತಿ

ವಾಷಿಂಗ್ಟನ್ : ’ಏಲಿಯನ್‌ಗಳು ಇರುವುದು ನಿಜ. ಮಾತ್ರವಲ್ಲ, ಇವು ಅಮೆರಿಕ ಸೇರಿದಂತೆ ಕೆಲ ದೇಶಗಳ ಜತೆಗೆ ಗುಟ್ಟಾಗಿ ವ್ಯವಹರಿಸುತ್ತಿವೆ. ಸದ್ಯ ಸಂಪೂರ್ಣ ವಿಷಯವನ್ನು ನಾನು ಈಗಲೇ ಹೇಳುವುದಿಲ್ಲ. ಕಾಲ ಪಕ್ವವಾದಾಗ ಎಲ್ಲವನ್ನೂ ಬಹಿರಂಗಪಡಿಸುತ್ತವೆ. ಅಷ್ಟೇ ಅಲ್ಲ. ಇವುಗಳು ತಮ್ಮದೇ ಆದ ಸಂಘಟನೆಯನ್ನೂ ಹೊಂದಿವೆ. ಅದರ ಹೆಸರು ಗಲ್‌ಕ್‌ಟಿಕ್ ಫೆಡರೇಷನ್. ಈ ಏಲಿಯನ್‌ಗಳು ಇರುವ ಇರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ತಿಳಿದಿತ್ತು. ಅದನ್ನು ವಿಶ್ವಕ್ಕೆ ಸಾರಲು ಅವರು ಮುಂದಾಗಿದ್ದರು. ಆದರೆ ಹಾಗೇನಾದರೂ ಅವರು ಹೇಳಿದ್ದರೆ ಅವರನ್ನು ಹುಚ್ಚ ಎಂದು ಹೇಳುತ್ತಿದ್ದರು. ಆದ್ದರಿಂದ ಅವರು ಹೇಳಲು ಹಿಂಜರಿದಿದ್ದಾರೆ’ ಎಂದು ಹೇಮ್ ಯೇಶದ್ ಹೇಳಿದ್ದಾರೆ.
ಇನ್ನೂ ಅಚ್ಚರಿ ಎನ್ನುವಂಥ ವಿಷಯವನ್ನು ಹೇಮ್ ಹೇಳಿದ್ದಾರೆ. ಅದೇನೆಂದರೆ ಮಂಗಳ ಗ್ರಹದಲ್ಲಿರುವ ಭೂಗತ ಬಾಹ್ಯಾಕಾಶ ಕೇಂದ್ರದಲ್ಲಿ ಅನ್ಯಗ್ರಹ ಜೀವಿಗಳು ಮನುಷ್ಯರ ಜತೆಗೂಡಿ ಸಂಶೋಧನೆ ನಡೆಸುತ್ತಿವೆ. ಭೂಮಿಯ ಮೇಲೆ ಸಂಶೋಧನೆ ನಡೆಸಲು ಅನ್ಯಗ್ರಹ ಜೀವಿಗಳು ಅಮೆರಿಕ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡಿವೆ. ವಿಶ್ವದ ಅಸ್ತಿತ್ವಕ್ಕೆ ಕಾರಣವಾಗಿರುವ ಅಂಶಗಳನ್ನು ಅರ್ಥ ಮಾಡಿಕೊಳ್ಳಲು ಅವೂ ಪ್ರಯತ್ನಿಸುತ್ತಿವೆ. ಈ ನಿಟ್ಟಿನಲ್ಲಿ ನಮ್ಮ ಸಹಾಯಬೇಕು ಎಂದು ಅಪೇಕ್ಷಿಸುತ್ತಿವೆ ಎಂದಿದ್ದಾರೆ!
ಅನ್ಯಗ್ರಹ ಜೀವಿ ಏಲಿಯನ್ ನಿಜಕ್ಕೂ ಇವೆಯೋ ಇಲ್ಲವೋ ಎಂಬುದು ಶತಮಾನಗಳಿಂದಲೇ ಚರ್ಚೆಯಾಗುತ್ತಿರುವ ವಿಷಯ. ಕೆಲವರು ಏಲಿಯನ್‌ಗಳನ್ನು ತಾವು ನೋಡಿರುವುದಾಗಿ ಹೇಳುತ್ತಿದ್ದರೂ ಈ ಬಗ್ಗೆ ಸಾಕಷ್ಟು ಪುರಾವೆಗಳಂತೂ ಇಲ್ಲ. ಆದರೂ ಏಲಿಯನ್‌ಗಳು ಆಗಾಗ್ಗೆ ಸುದ್ದಿ ಮಾಡುತ್ತಲೇ ಇರುತ್ತವೆ.
ಆದರೆ ಈಗ ಸುದ್ದಿ ಮಾಡಿರುವುದು ಸಾಮಾನ್ಯ ಜನರಲ್ಲ. ಬದಲಿಗೆ ಇಸ್ರೇಲ್‌ನ ಪ್ರಸಿದ್ಧ ಹಿರಿಯ ವಿಜ್ಞಾನಿ ಹೇಮ್ ಯೇಶದ್! ಇವರು ಹೇಳಿರುವ ಒಂದೊಂದು ಮಾಹಿತಿಗಳು ಸಾಮಾನ್ಯ ಜನರಿಗೆ ನಂಬುವುದಕ್ಕಂತೂ ಸಾಧ್ಯವೇ ಇಲ್ಲ. ಇಸ್ರೇಲ್ ಸರ್ಕಾರದ ಬಾಹ್ಯಾಕಾಶ ರಕ್ಷಣಾ ಯೋಜನೆಯ ಮುಖ್ಯಸ್ಥರಾಗಿ ೧೯೮೧ರಿಂದ ೨೦೧೦ರವರೆಗೆ ಕಾರ್ಯ ನಿರ್ವಹಿಸಿರುವ ೮೭ ವರ್ಷದ ಈ ವಿಶ್ವಖ್ಯಾತಿಯ ವಿಜ್ಞಾನಿ ಹೇಳಿದ್ದೇನು ಎಂಬುದು ಇಲ್ಲಿದೆ ನೋಡಿ..
ಇಸ್ರೇಲಿ ಪ್ರಕಾಶನ ಸಂಸ್ಥೆ ಯಡಿಯೋಟ್ ಅಹರೊನೋಟ್‌ಗೆ ನೀಡಿದ ಸಂದರ್ಶನದಲ್ಲಿ ಅವರು ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಈ ಹಿಂದೆ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಸಹ ಅನ್ಯಗ್ರಹ ಜೀವಿಗಳ ಅಸ್ತಿತ್ವ ಒಪ್ಪಿಕೊಂಡಿದ್ದರು. ಆದರೆ ಹೆಚ್ಚೇನೂ ವಿವರ ನೀಡಿರಲಿಲ್ಲ ಎಂದು ಅವರು ಹೇಳಿದ್ದಾರೆ.
ಆದರೆ ಈ ಸಂದರ್ಶನಕ್ಕೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದೆಲ್ಲಾ ರೀಲು ಎಂದಿದ್ದಾರೆ. ಇದೀಗ ಅಮೆರಿಕದಲ್ಲಿ ಅಧಿಕಾರ ಬದಲಾವಣೆಯ ಪ್ರಕ್ರಿಯೆ ಆರಂಭವಾಗಿರುವುದರಿಂದ, ನೂತನ ಅಧ್ಯಕ್ಷ ಜೋ ಬೈಡೆನ್ ಮೇಲೆ ಪ್ರಭಾವ ಬೀರಲು ಯೆಶೆದ್ ಈ ಹೇಳಿಕೆ ನೀಡಿರಬಹುದು. ಈ ಮೂಲಕ ಬಾಹ್ಯಾಕಾಶ ಸಂಶೋಧನೆಗೆ ಹರಿದುಬರುತ್ತಿರುವ ಅನುದಾನ ಉಳಿಸಿಕೊಳ್ಳಲು ವಿಜ್ಞಾನಿಗಳು ಪ್ರಯತ್ನಿಸುತ್ತಿದ್ದಾರೆ ಎಂದು ಆಕ್ಷೇಪ ವ್ಯಕ್ತವಾಗಿದೆ.