ಮೈಸೂರಿನಲ್ಲಿ ಎಸೆದ ನೋಟಿನಿಂದ ಆತಂಕ..

ಮೈಸೂರಿನಲ್ಲಿ ಎಸೆದ ನೋಟಿನಿಂದ ಆತಂಕ..
ಮೈಸೂರಿನಲ್ಲಿ ಎಸೆದ ನೋಟಿನಿಂದ ಆತಂಕ.

ಮೈಸೂರು: ಬೆಳಿಗ್ಗೆ ಎದ್ದ ತಕ್ಷಣ ಮನೆಯ ಮುಂದೆ ಬಿದ್ದಿದ್ದ ನೂರು ರೂಪಾಯಿ ಮುಖಬೆಲೆಯ ನೋಟೊಂದು ವ್ಯಕ್ತಿಯೋರ್ವರಲ್ಲಿ ಆತಂಕ ಸೃಷ್ಟಿಸಿದ ಘಟನೆ ಮೈಸೂರಿನ ರಾಮಕೃಷ್ಣ ನಗರದ ಐ ಬ್ಲಾಕ್ ನಲ್ಲಿ ನಡೆದಿದೆ.
ಸದ್ಯ ರಾಮಕೃಷ್ಣ ನಗರದ ಐ ಬ್ಲಾಕ್ ನಿವಾಸಿ ರಂಗನಾಥ್ ಮನೆಯ ಎದುರು ನೂರು ರೂಪಾಯಿ ಮುಖ ಬೆಲೆಯ ನೋಟೊಂದು ಬಿದ್ದಿತ್ತು.ಹೀಗಾಗಿ ರಂಗನಾಥ್, ತಮ್ಮ ಅಕ್ಕಪಕ್ಕದ ಮನೆಯವರಲ್ಲಿ ಯಾರಾದರೂ ನೂರು ರೂಪಾಯಿ ಬೀಳಿಸಿದ್ದೀರಾ ಎಂದು ವಿಚಾರಿಸಿದ್ದು, ಎಲ್ಲರೂ ತಮ್ಮದಲ್ಲವೆಂದು ತಿಳಿಸಿದ್ದಾರೆ. 
ಇನ್ನು ಸ್ಥಳಕ್ಕಾಗಮಿಸಿದ ಕುವೆಂಪು ನಗರ ಠಾಣೆ ಪೊಲೀಸರು ಹಾಗೂ ಮಹಾನಗರ ಪಾಲಿಕೆ ಅಧಿಕಾರಿಗಳು ಪರಿಶೀಲನೆ ನಡೆಸಿದರು.
ಬಳಿಕ ಸ್ಯಾನಿಟೈಸರ್ ಮಾಡುವ ಮೂಲಕ ನೋಟನ್ನು ಎತ್ತಿಕೊಂಡು ಪರಿಶೀಲನೆಗೆ ಕೊಂಡೊಯ್ದಿದ್ದಾರೆ.