ಮೈಸೂರಿನಲ್ಲಿ ಐವರು ಡಿಸ್ಚಾರ್ಜ್..

ಮೈಸೂರಿನಲ್ಲಿ ಐವರು ಡಿಸ್ಚಾರ್ಜ್..

ಮೈಸೂರು: ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದ್ದು, ಸಾವಿನ ಸಂಖ್ಯೆ ಕೂಡ ಹೆಚ್ಚಾಗುತ್ತಲೇ ಇದೆ. ಆದರೆ ಸಮಾಧಾನದ ಸಂಗತಿ ಏನೆಂದರೆ ಮೈಸೂರಿನಲ್ಲಿಂದು ಐವರು ಕೊರೋನಾ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. 
ಇನ್ನು ೫ ಮಂದಿ ಕೊರೋನಾ ಸೋಂಕಿತರ ಗುಣಮುಖದಿಂದ ಆಕ್ಟೀವ್ ಸೋಂಕಿತರ ಸಂಖ್ಯೆ ೪೫ಕ್ಕೆ ಇಳಿದಿದ್ದು,ಸಂಪೂರ್ಣ ಗುಣವಾದವರ ಸಂಖ್ಯೆ ೪೩ಕ್ಕೆ ಏರಿಕೆಯಾಗಿದೆ. 
ಇದಲ್ಲದೆ, ತಬ್ಲಿಘಿ ಪ್ರಕರಣದಿಂದ ಸೋಂಕಿತರಾಗಿದ್ದ ಈ ಐವರು ರೋಗಿಗಳು ಇಂದು ಸಂಪೂರ್ಣವಾಗಿ ಗುಣಮುಖರಾಗಿ ಮನೆಗೆ ಹೋಗಿದ್ದಾರೆ ಅಂತ ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಮಾಹಿತಿ ನೀಡಿದ್ದಾರೆ.