ಇಂದು 8 ಪ್ರಕರಣ, ಬೆಂಗಳೂರಿಗೆ ಸ್ವಲ್ಪ ರಿಲೀಫ್..

ಇಂದು 8 ಪ್ರಕರಣ, ಬೆಂಗಳೂರಿಗೆ ಸ್ವಲ್ಪ ರಿಲೀಫ್..
ಬೆಂಗಳೂರಿಗೆ ಸ್ವಲ್ಪ ರಿಲೀಫ್..

ಬೆಂಗಳೂರು: ರಾಜ್ಯದಲ್ಲಿ ಮತ್ತೆ ೮ ಜನರಿಗೆ ಕೊರೊನಾ ಸೋಂಕು ದೃಢ ಪಟ್ಟಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. 
ಇಂದು ಮಧ್ಯಾಹ್ನ ಮಾಧ್ಯಮ ಪ್ರಕಟಣೆ ಮಾಡಿರುವ ಇಲಾಖೆ,ಒಟ್ಟು ಸೋಂಕಿತರ ಸಂಖ್ಯೆ ೫೧೧ಕ್ಕೆ ಏರಿಕೆಯಾಗಿದೆ ಎಂದು ತಿಳಿಸಿದೆ.
ಹೊಸ ೮ ಪ್ರಕರಣಗಳ ಪೈಕಿ ಬೆಂಗಳೂರು ೧, ದಕ್ಷಿಣ ಕನ್ನಡ ೨, ಬಾಗಲಕೋಟೆ ಜಿಲ್ಲೆಯ ಜಮಖಂಡಿ ೨, ವಿಜಯಪುರ ೨, ಮಂಡ್ಯ ಜಿಲ್ಲೆ ನಾಗಮಂಗಲದಲ್ಲಿ ೧ ಪ್ರಕರಣ ಪತ್ತೆಯಾಗಿದೆ.
ಈ ಕುರಿತು ಆರೋಗ್ಯ ಸಚಿವ ಶ್ರೀರಾಮುಲು ಟ್ವೀಟ್ ಮಾಡಿದ್ದು,ಈವರೆಗೆ ೧೮೮ ಜನರು ಕೊರೊನಾದಿಂದ ಸಂಪೂರ್ಣ ಗುಣಮುಖರಾಗಿದ್ದಾರೆ. ೧೯ ಜನರ ಚೇತರಿಕೆ ಕಾಣದೆ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.
ಬೆಂಗಳೂರು ನಗರದಲ್ಲಿ ರೋಗಿ ನಂಬರ್ ೪೬೬ರ ೫೦ ವರ್ಷದ ಪುರುಷ ಇಂದು ಸಾವನ್ನಪ್ಪಿದ್ದಾರೆ.ಈ ರೋಗಿ ಏಪ್ರಿಲ್ ೨೪ರಂದು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದರು. ಇವರಿಗೆ ನ್ಯೂಮೋನಿಯಾ, ಅಧಿಕ ರಕ್ತದೊತ್ತಡ, ಎಚ್‌ಸಿವಿ ಪಾಸಿಟಿವ್ ಹಾಗೂ ಕಿಡ್ನಿ ಸಮಸ್ಯೆ ಇತ್ತು. ಇವರು ಇಂದು ಆಸ್ಪತ್ರೆಯ ತುರ್ತು ನಿರ್ಗಮನದಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಸದ್ಯ ಆರೋಗ್ಯ ಇಲಾಖೆ ಕೊರೊನಾದ ಬದಲಿಗೆ ಈ ವ್ಯಕ್ತಿ ಅನ್ಯ ಕಾರಣದಿಂದ ಸಾವು ಕಂಡಿದ್ದಾರೆ ಅಂತ ಸ್ಪಷ್ಟಪಡಿಸಿದೆ.