ಕೊರೊನಾ ನಿಯಮಗಳಿಗಿಲ್ಲ ಕಿಮ್ಮತ್ತು..!

Covid

ಕೊರೊನಾ ನಿಯಮಗಳಿಗಿಲ್ಲ ಕಿಮ್ಮತ್ತು..!

ಬೆಂಗಳೂರು: ರಾಜ್ಯದಲ್ಲಿ ಅನ್‌ಲಾಕ್ ೩.೦ ಜಾರಿ ಹಿನ್ನೆಲೆಯಲ್ಲಿ ವ್ಯಾಪಾರ ವಹಿವಾಟು, ರೈಲು, ಬಸ್ ಸಂಚಾರ, ಮಠ, ಮಂದಿರಗಳು ಸೇರಿದಂತೆ ಬಹುತೇಕ ಎಲ್ಲ ಚಟುವಟಿಕೆಗಳಿಗೆ ಅವಕಾಶ ನೀಡಲಾಗಿದೆ.
ರಾಜಧಾನಿಯ ಯಶವಂತಪುರ, ಕೆ.ಆರ್.ಮಾರ್ಕೆಟ್, ಮಲ್ಲೇಶ್ವರಂ, ಜಯನಗರ ಮಾರ್ಕೆಟ್‌ನಲ್ಲಿ ಜನರ ದೊಡ್ಡ ಗುಂಪು ಕಂಡುಬಂತು. ರಸ್ತೆಬದಿ ವ್ಯಾಪಾರ ಕೂಡ ಬಲು ಜೋರಾಗಿದ್ದು, ನಿಯಮ ಮೀರಿ ಖರೀದಿಗೆ ಜನರು ಮುಂದಾಗಿದ್ದರು. ಒಟ್ಟಿನಲ್ಲಿ ಕೊರೊನಾಗೆ ಬೆಂಗಳೂರು ಜನರು ಡೋಂಟ್ ಕೇರ್ ಎನ್ನುತ್ತಿರುವುದು ವಿಪರ್ಯಾಸವೇ ಸರಿ.
ಪ್ರಯಾಣಿಕರು ಮಾತ್ರ ವಿರಳ ಅನ್‌ಲಾಕ್ ೩.೦ ಜಾರಿಯಾಗಿದ್ದು, ಬಿಎಂಟಿಸಿ ಬಸ್ಸುಗಳು ಸಂಪೂರ್ಣ ಪ್ರಮಾಣದಲ್ಲಿ ರಸ್ತೆಗಿಳಿದಿವೆ. ಇಂದಿನಿಂದ ಸರ್ಕಾರಿ ಕಚೇರಿ ಸೇರಿದಂತೆ ಎಲ್ಲೆಡೆ ಶೇ. ೧೦೦ರಷ್ಟು ಅವಕಾಶ ಕೊಟ್ಟಿರುವುದರಿಂದ ಬಸ್, ಮೆಟ್ರೋ ಸಂಚಾರಕ್ಕೂ ಅನುಮತಿ ಸಿಕ್ಕಿದೆ. ಆದ್ರೆ ಬೆಂಗಳೂರಿನಲ್ಲಿ ರಾತ್ರಿ ೯ ರಿಂದ ಬೆಳಗ್ಗೆ ೫ರವರೆಗೆ ಬಿಎಂಟಿಸಿ ಬಸ್ ಸಂಚಾರವಿರುವುದಿಲ್ಲ.
ಇಂದಿನಿಂದ ೫,೦೦೦ ಬಿಎಂಟಿಸಿ ಬಸ್‌ಗಳು, ೪,೦೦೦ ಕೆಎಸ್‌ಆರ್‌ಟಿಸಿ ಬಸ್‌ಗಳು ಕಾರ್ಯಾಚರಣೆಗಿಳಿದಿವೆ. ಪ್ರಯಾಣಿಕರು ಸೀಟ್‌ನಲ್ಲಿ ಮಾತ್ರ ಕುಳಿತು ಪ್ರಯಾಣಿಸಲು ಅವಕಾಶವಿದ್ದು, ಬಸ್‌ನಲ್ಲಿ ನಿಂತುಕೊಂಡು ಪ್ರಯಾಣಿಸಲು ಅವಕಾಶ ಇಲ್ಲ. ಜೊತೆಗೆ ಕೋವಿಡ್ ರೂಲ್ಸ್ ಪಾಲಿಸದ ಪ್ರಯಾಣಿಕರಿಗೆ ಬಸ್ ನಿಲ್ದಾಣಗಳಲ್ಲಿ ಅಧಿಕಾರಿಗಳು ದಂಡ ಹಾಕುತ್ತಿದ್ದ ದೃಶ್ಯಗಳು ಕಂಡುಬಂತು.
ಪ್ರಯಾಣಿಕರು ಮತ್ತು ಚಾಲಕರು, ನಿರ್ವಾಹಕರಿಗೆ ಮಾಸ್ಕ್ ಕಡ್ಡಾಯ ಎಂದು ಜಾಗೃತಿಯನ್ನೂ ಮೂಡಿಸಲಾಗುತ್ತಿದೆ. ಆದರೂ ಜನ ಸಂಚಾರ ಎಂದಿನಂತೆ ಇಲ್ಲ. ಪ್ರಯಾಣಿಕರು ಕಡಿಮೆ ಪ್ರಮಾಣದಲ್ಲಿ ಓಡಾಟ ನಡೆಸುತ್ತಿದ್ದಾರೆ. ನೈಟ್ ಕರ್ಫ್ಯೂ ಹಿನ್ನೆಲೆ ರಾತ್ರಿ ಪಾಳಿಯ ಬಸ್ ಓಡಾಟವಿಲ್ಲ.