ಪಾರ್ಥಿವ್ ಪಟೇಲ್ ಕ್ರಿಕೆಟ್‌ನಿಂದ ನಿವೃತ್ತಿ ಘೋಷಣೆ

ಪಾರ್ಥಿವ್ ಪಟೇಲ್ ಕ್ರಿಕೆಟ್‌ನಿಂದ ನಿವೃತ್ತಿ ಘೋಷಣೆ

ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಪಾರ್ಥಿವ್ ಪಟೇಲ್ ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಣೆ ಮಾಡಿದ್ದಾರೆ. ಇದರೊಂದಿಗೆ ೩೫ ವರ್ಷದ ಪಾರ್ಥಿವ್ ಪಟೇಲ್ ಅವರ ೧೮ ವರ್ಷದ ಕ್ರಿಕೆಟ್ ವೃತ್ತಿ ಜೀವನ ಅಂತ್ಯಗೊಂಡಿದೆ. ೨೦೦೨ರಲ್ಲಿ ವಿಶ್ವದ ಅತ್ಯಂತ ಕಿರಿಯ ಟೆಸ್ಟ್ ವಿಕೆಟ್ ಕೀಪರ್ ಎಂಬ ದಾಖಲೆಯೊಂದಿಗೆ ಅಂತರರಾಷ್ಟ್ರೀಯ ಕ್ರಿಕೆಟ್ ವೃತ್ತಿ ಆರಂಭಿಸಿದ ಅವರು ೨೫ ಟೆಸ್ಟ್, ೩೮ ಏಕದಿನ ಮತ್ತು ಎರಡು ಟಿ೨೦ ಅಂತಾರಾಷ್ಟ್ರೀಯ ಪಂದ್ಯಗಳನ್ನ ಅವರು ಆಡಿದ್ದಾರೆ. ಅದರ ಜೊತೆಗೆ ಗುಜರಾತ್ ರಾಜ್ಯ ತಂಡದ ಪರವಾಗಿ ೧೯೪ ಪ್ರಥಮ ದರ್ಜೆ ಪಂದ್ಯಗಳನ್ನೂ ಆಡಿದ್ದಾರೆ.
೨೦೦೨ರಲ್ಲಿ ವಿಶ್ವದ ಅತ್ಯಂತ ಕಿರಿಯ ಟೆಸ್ಟ್ ವಿಕೆಟ್ ಕೀಪರ್ ಎಂಬ ದಾಖಲೆಯೊಂದಿಗೆ ಅಂತರರಾಷ್ಟ್ರೀಯ ಕ್ರಿಕೆಟ್ ವೃತ್ತಿ ಆರಂಭಿಸಿದ ಅವರು ೨೫ ಟೆಸ್ಟ್, ೩೮ ಏಕದಿನ ಮತ್ತು ಎರಡು ಟಿ೨೦ ಅಂತಾರಾಷ್ಟ್ರೀಯ ಪಂದ್ಯಗಳನ್ನ ಆಡಿ ಇದೀಗ ನಿವೃತ್ತಿ ಘೋಷಿಸಿದ್ದಾರೆ.
ಟೀಮ್ ಇಂಡಿಯಾದ ವಿಕೆಟ್ ಕೀಪಿಂಗ್ ಸ್ಥಾನಕ್ಕೆ ಪೈಪೋಟಿ ಹೆಚ್ಚಿತ್ತು. ವೃದ್ಧಿಮಾನ್ ಸಾಹಾ, ದಿನೇಶ್ ಕಾರ್ತಿಕ್ ಮೊದಲಾದವರ ಸ್ಪರ್ಧೆ ನಡುವೆ ಪಾರ್ಥಿವ್ ಪಟೇಲ್ ಭಾರತ ತಂಡದಲ್ಲಿ ಸ್ಥಾನ ಗಿಟ್ಟಿಸಲು ಹರಸಾಹಸ ಮಾಡಬೇಕಾಯಿತು. ಆದರೆ, ಮಹೇಂದ್ರ ಸಿಂಗ್ ಧೋನಿ ಆಗಮನದ ನಂತರ ವಿಕೆಟ್ ಕೀಪಿಂಗ್ ಸ್ಥಾನ ಬಹುತೇಕ ಅಸಾಧ್ಯವಾಗಿ ಹೋಗಿತ್ತು.
೨೦೦೨ರ ಭಾರತ ಜೂನಿಯರ್ ವಿಶ್ವಕಪ್ ತಂಡದ ಕ್ಯಾಪ್ಟನ್ ಆಗಿದ್ದ ಅವರು ಅದೇ ವರ್ಷ ಟೆಸ್ಟ್ ತಂಡಕ್ಕೆ ಆಯ್ಕೆಯಾಗಿ ಬಹಳ ಕ್ಷಿಪ್ರವಾಗಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಆಗ ಅವರ ವಯಸ್ಸು ೧೭ ವರ್ಷ ೧೫೩ ದಿನ. ವಿಶ್ವದ ಅತಿ ಕಿರಿಯ ವಯಸ್ಸಿನ ವಿಕೆಟ್ ಕೀಪರ್ ಎಂಬ ದಾಖಲೆ ಬರೆದರು. ರಣಜಿ ತಂಡಕ್ಕೆ ಆಯ್ಕೆಯಾಗುವ ೨ ವರ್ಷ ಮುನ್ನವೇ ಅವರು ಇಂಟರ್ನ್ಯಾಷನಲ್ ಟೆಸ್ಟ್‌ಗೆ ಕಾಲಿಟ್ಟಿದ್ದರು.
ಪಾರ್ಥಿವ್ ಪಟೇಲ್ ಅವರು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಸಾಕಷ್ಟು ಯಶಸ್ಸು ಗಳಿಸಿದ್ದಾರೆ. ೧೯೪ ಪಂದ್ಯ ಆಡಿರುವ ಅವರು ೧೧,೨೪೦ ರನ್‌ಗಳನ್ನ ಭಾರಿಸಿದ್ದಾರೆ. ೨೭ ಶತಕ ಹಾಗೂ ೬೨ ಅರ್ಧಶತಕಗಳನ್ನ ಗಳಿಸಿದ್ದಾರೆ. ಐಪಿಎಲ್ ಒಳಗೊಂಡಂತೆ ಸ್ಥಳೀಯ ಟಿ೨೦ ಕ್ರಿಕೆಟ್‌ಲ್ಲಿ ೨೦೦ಕ್ಕೂ ಹೆಚ್ಚು ಪಂದ್ಯಗಳನ್ನಾಡಿದ್ದಾರೆ.
ಪಾರ್ಥಿವ್ ಪಟೇಲ್ ಕ್ರಿಕೆಟ್ ವೃತ್ತಿಜೀವನ:
ಟೆಸ್ಟ್ ಕ್ರಿಕೆಟ್:
ಪಂದ್ಯ: ೨೫
ರನ್: ೯೩೪
ಸರಾಸರಿ: ೩೧.೧೩
ಏಕದಿನ ಕ್ರಿಕೆಟ್:
ಪಂದ್ಯ: ೩೮
ರನ್: ೭೩೬
ಸರಾಸರಿ: ೨೩.೭೪
ಕ್ರಿಕೆಟ್:
ಪಂದ್ಯ: ೨
ರನ್: ೩೬
ಸರಾಸರಿ: ೧೮
ಪ್ರಥಮ ದರ್ಜೆ ಕ್ರಿಕೆಟ್:
ಪಂದ್ಯ: ೧೯೪
ರನ್: ೧೧,೨೪೦
ಸರಾಸರಿ: ೪೩.೩೯
ಸ್ಥಳೀಯ ಟಿ೨೦ ಕ್ರಿಕೆಟ್:
ಪಂದ್ಯ: ೨೦೪
ರನ್: ೪,೩೦೦
ಸರಾಸರಿ: ೨೨.೮೭