ಬಾಲಿವುಡ್ ನಟ ದಿಲೀಪ್‌ಕುಮಾರ್ ಇನ್ನಿಲ್ಲ

Dilipkumar

ಬಾಲಿವುಡ್ ನಟ ದಿಲೀಪ್‌ಕುಮಾರ್ ಇನ್ನಿಲ್ಲ

ಮುಂಬೈ: ಹಿಂದಿ ಚಿತ್ರರಂಗದ ಖ್ಯಾತ ನಟ, ಪದ್ಮಭೂಷಣ, ಪದ್ಮವಿಭೂಷಣ ಹಾಗೂ ದಾದಾ ಸಾಹೇಬ್ ಫಾಲ್ಕೆ ಪುರಸ್ಕೃತ ದಿಲೀಪ್ ಕುಮಾರ್ (೯೮) ಬುಧವಾರ ಬೆಳಗ್ಗೆ .೩೦ರ ಸುಮಾರಿಗೆ ನಿಧನರಾಗಿದ್ದಾರೆ.

ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ದಿಲೀಪ್ ಕುಮಾರ್ ಅವರನ್ನು ಮುಂಬೈನ ಪಿ.ಡಿ.ಹಿಂದೂಜಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಅವರಿಂದು ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ.

ಮುಹಮ್ಮದ್ ಯೂಸುಫ್ ಖಾನ್ ಹೆಸರಿನ ಇವರು ಬಾಲಿವುಡ್ನಲ್ಲಿದಿಲೀಪ್ ಕುಮಾರ್ಎಂದೇ ಖ್ಯಾತರಾಗಿದ್ದರು. ಪೇಶಾವರದಲ್ಲಿ ೧೯೨೨ರ ಡಿಸೆಂಬರ್ ೧೧ರಂದು ಜನಿಸಿದ ದಿಲೀಪ್ ಕುಮಾರ್ ನಂತರದಲ್ಲಿ ಮುಂಬೈಗೆ ಸ್ಥಳಾಂತರಗೊಂಡರು. ತಮ್ಮ ಅದ್ಭುತ ನಟನೆಗಾಗಿ ಅವರು ಪದ್ಮಭೂಷಣ, ಪದ್ಮವಿಭೂಷಣ ಹಾಗೂ ದಾದಾ ಸಾಹೇಬ್ ಫಾಲ್ಕೆ ಗೌರವಗಳಿಗೆ ಭಾಜನರಾಗಿದ್ದಾರೆ.

ರಾಜ್ಯಸಭೆಯ ಸದಸ್ಯರೂ ಆಗಿದ್ದ ದಿಲೀಪ್ ಕುಮಾರ್ ಖ್ಯಾತ ನಟಿ ಸಾಯಿರಾ ಬಾನು ಅವರನ್ನು ೧೯೬೬ರಲ್ಲಿ ವಿವಾಹವಾದರು. ಜ್ವಾರ್ ಭಾಟಾ (೧೯೪೪) ಸಿನಿಮಾ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿದ ಅವರು ಸುಮಾರು ಐದು ದಶಕಗಳ ಸಿನಿಮಾ ಪಯಣದಲ್ಲಿ ೬೫ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಬಾಲಿವುಡ್ಟ್ರಾಜಿಡಿ ಕಿಂಗ್ಎಂದೇ ಖ್ಯಾತರಾಗಿದ್ದ ಹಿರಿಯ ನಟ ಬರೋಬ್ಬರಿ ಆರು ದಶಕಗಳವರೆಗೆ ಸಿನಿರಂಗದಲ್ಲಿ ಮಿಂಚಿದವರು. ಅವರು ತಮ್ಮ ವೃತ್ತಿಜೀವನದಲ್ಲಿ ೬೫ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಅವುಗಳಲ್ಲಿ ಮುಖ್ಯವಾದ ಸಿನಿಮಾಗಳೆಂದರೆದೇವದಾಸ್’ (೧೯೫೫), ’ನಯಾ ದೋರ್’ (೧೯೫೭), ’ಮೊಘಲ್--ಅಝಮ್’ (೧೯೬೦), ’ಗಂಗಾ ಜಮುನಾ (೧೯೬೧), ’ಕ್ರಾಂತಿ’ (೧೯೮೧), ’ಕರ್ಮ’ (೧೯೮೬) ಮುಂತಾದವು. ಇನ್ನು ಅವರು ಕೊನೆಯ ಬಾರಿಗೆ ಬಣ್ಣ ಹಚ್ಚಿದ್ದು ೧೯೯೮ರಲ್ಲಿ ಬಿಡುಗಡೆಯಾದಕ್ವಿಲಾಸಿನಿಮಾದಲ್ಲಿ.

ಸಂತಾಪ: ನಟ ಅಮಿತಾಬ್ ಬಚ್ಚನ್ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.