ಹಾವೇರಿಯಲ್ಲಿ ಸೀಡ್ಸ್ ಕಂಪನಿ ಮೇಲೆ ದಾಳಿ..

ಹಾವೇರಿಯಲ್ಲಿ ಸೀಡ್ಸ್ ಕಂಪನಿ ಮೇಲೆ ದಾಳಿ..
ಸೀಡ್ಸ್ ಕಂಪನಿ ಮೇಲೆ ದಾಳಿ..

ಹಾವೇರಿ: ಕಳಪೆ ಮೆಕ್ಕೆಜೋಳ ಬೀಜ ಅಕ್ರಮವಾಗಿ ದಾಸ್ತಾನು ಮಾಡಿದ್ದ ಕಾಂಚನಗAಗಾ ಸೀಡ್ಸ್ ಕಂಪನಿ ಕಾರ್ಖಾನೆ ಮೇಲೆ ಕೃಷಿ ಅಧಿಕಾರಿಗಳು ಪೊಲೀಸರ ಜೊತೆಗೂಡಿ ದಾಳಿ ನಡೆಸಿದ ಘಟನೆ ಹಾವೇರಿ ಜಿಲ್ಲೆಯಲ್ಲಿ ನಡೆದಿದೆ.
ಹಾವೇರಿ ತಾಲೂಕಿನ ಗುತ್ತಲ ಪಟ್ಟಣದ ಹೊರವಲಯದಲ್ಲಿರುವ ಕಾರ್ಖಾನೆಯಲ್ಲಿ ಅಂದಾಜು ೨೮ ಲಕ್ಷ ಮೌಲ್ಯದ ೨೮೦ ಕಳಪೆ ಬೀಜದ ಬ್ಯಾಗ್‌ಗಳನ್ನು ಕೃಷಿ ಜಂಟಿ ನಿರ್ದೇಶಕ ಮಂಜುನಾಥ ಹಾಗೂ ಪೊಲೀಸ್ ನೇತೃತ್ವದ ತಂಡ ವಶಕ್ಕೆ ಪಡೆದಿದ್ದಾರೆ.
ಇನ್ನು ವಾಣಿಜ್ಯ ಮೆಕ್ಕೆಜೋಳದ ೮೯ ಬ್ಯಾಗ್, ೧೯೬ ರಾಸಾಯನಿಕ ಗೊಬ್ಬರ ಬ್ಯಾಗ್‌ಗಳು ವಶಕ್ಕೆ ಪಡೆಯಲಾಗಿದೆ.