ರೌಡಿಗಳ ಮೇಲೆ ಹದ್ದಿನ  ಕಣ್ಣಿಡಲು ಪೊಲೀಸರಿಗೆ ಸೂಚನೆ

Kamal Panth

ರೌಡಿಗಳ ಮೇಲೆ ಹದ್ದಿನ   ಕಣ್ಣಿಡಲು ಪೊಲೀಸರಿಗೆ ಸೂಚನೆ

ಬೆಂಗಳೂರು: ಬೆಂಗಳೂರಿನಲ್ಲಿ ಮತ್ತೆ ರೌಡಿಗಳ ಆರ್ಭಟ ಹೆಚ್ಚಾದ ಹಿನ್ನೆಲೆ ರೌಡಿಗಳ ಮೇಲೆ ಹದ್ದಿನ ಕಣ್ಣಿಡಲು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಪೊಲೀಸರಿಗೆ ಸೂಚನೆ ನೀಡಿದ್ದಾರೆ.

ಕಳೆದ ೧೫ ದಿನಗಳಲ್ಲಿ ನಾಲ್ಕು ಪ್ರತಿಕಾರ ದಾಳಿಗಳು ನಡೆದಿವೆ. ಹಳೆ ವೈಷಮ್ಯದ ಮೇಲೆ ನಾಲ್ಕು ಕೊಲೆಯಾದ ಕಾರಣ ತಮ್ಮ ತಮ್ಮ ವ್ಯಾಪ್ತಿಯಲ್ಲಿರುವ ರೌಡಿಶೀಟರ್ ಚಲನವಲನಗಳ ಮೇಲೆ ಹೆಚ್ಚು ನಿಗಾ ಇಡಲು ತಿಳಿಸಿದ್ದಾರೆ.

ಜೂ.೨೨ರಂದು ರಶೀದ್ ಮಲಬಾರಿ ಸಹಚರ ಕರೀಂ ಅಲಿ ಹತ್ಯೆ ನಡೆದಿದೆ. ಜೂ.೨೪ ರಂದು ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್ ಕೊಲೆಯಾಗಿದೆ. ಜು.೨ರಂದು ಫೈನಾನ್ಸಿಯರ್ ಮದನ್ ಕೊಲೆ ನಡೆದಿದೆ. ಜು.೩ಕ್ಕೆ ಡಿಜೆ ಹಳ್ಳಿಯಲ್ಲಿ ಕೃಷ್ಣಮೂರ್ತಿ ಕೊಲೆಯಾಗಿದೆ. ಹಳೆ ವೈಷಮ್ಯ ಹಿನ್ನೆಲೆ ನಗರದಲ್ಲಿ ಪ್ರತಿದಾಳಿಗಳು ಹೆಚ್ಚಾಗಿವೆ. ಮದನ್ ಹಾಗೂ ರೇಖಾರನ್ನು ಹಾಡಹಗಲೇ ಹತ್ಯೆಗೈದಿದ್ದರು. ಹೀಗಾಗಿ ರೌಡಿಗಳ ಮೇಲೆ ಕಣ್ಣಿಟ್ಟು ಕಠಿಣ ಕ್ರಮಕೈಗೊಳ್ಳಲು ತಾಕೀತು ಮಾಡಿದ್ದಾರೆ.

ರೌಡಿಶೀಟರ್ ಸೆರೆ: ಗನ್ನಿಂದ ಬೆದರಿಸಿ ವಸೂಲಿ ಮಾಡುತ್ತಿದ್ದ ರೌಡಿಶೀಟರ್ ಪೊಲೀಸರು ಬಂಧಿಸಿದ್ದಾರೆ. ಮಧುಸೂಧನ್ ಅಲಿಯಾಸ್ ಗನ್ ಮಧು ಎಂಬುವವನನ್ನು ಬೆಂಗಳೂರಿನ ಕೋಣನಕುಂಟೆ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಮಧುಸೂಧನ್ ಇತ್ತೀಚೆಗೆ ಜೈಲಿನಿಂದ ಬಿಡುಗಡೆಯಾಗಿದ್ದು, ಪೊಲೀಸರು ವಸೂಲಿ ಮಾಡುತ್ತಿದ್ದವನನ್ನ ಹೆಡೆಮುರಿ ಕಟ್ಟಿ ಪರಪ್ಪನ ಅಗ್ರಹಾರಕ್ಕೆ ಬಿಟ್ಟಿದ್ದಾರೆ.