ಟೀಂ ಇಂಡಿಯಾದ ಮಾಜಿ ಕೂಲ್ ಕ್ಯಾಪ್ಟನ್ ಎಂಎಸ್ ಧೋನಿ @ ೪೦

M S Dhoni

ಟೀಂ ಇಂಡಿಯಾದ ಮಾಜಿ ಕೂಲ್  ಕ್ಯಾಪ್ಟನ್ ಎಂಎಸ್ ಧೋನಿ @ ೪೦

ನವದೆಹಲಿ: ಭಾರತದ ಮಾಜಿ ಕ್ರಿಕೆಟಿಗ ಕ್ಯಾಪ್ಟನ್ ಕೂಲ್ ಎಂಎಸ್ ಧೋನಿ ಇಂದು ತಮ್ಮ ೪೦ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.

ಪ್ರಸ್ತುತ ಪೀಳಿಗೆಯ ಎಲ್ಲ ಆಟಗಾರರಲ್ಲಿ ಹೊಸ ಭಾರತವನ್ನು ಉತ್ತೇಜಿಸಿದ ಮಾಹಿ, ಆಕ್ರಮಣಕಾರಿಯಲ್ಲದೇ, ದುರಹಂಕಾರವಿಲ್ಲದೇ ತಂಡವನ್ನು ಮುನ್ನಡೆಸುವಲ್ಲಿ ಯಶಸ್ವಿಯಾಗಿದ್ದಾರೆ. ಮೂಲಕ ಧೋನಿ ಕ್ರಿಕೆಟ್ ಕನಸು ಕಾಣುವ ಅದೆಷ್ಟೋ ಯುವ ಜನರಿಗೆ ರೋಲ್ ಮಾಡೆಲ್ ಮತ್ತು ಮಿನುಗುವ ತಾರೆಯಾಗಿ ಕಂಡಿದ್ದಾರೆ.

೨೦೦೪ರಂದು ಭಾರತ ಹಾಗೂ ಬಾಂಗ್ಲಾದೇಶ ನಡುವಣ ಏಕದಿನ ಪಂದ್ಯವನ್ನಾಡುವ ಮೂಲಕ ಇವರು ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದರು. ಎಂಎಸ್ ಧೋನಿ ನಾಯಕತ್ವದಲ್ಲಿ ಭಾರತ ತಂಡ ೨೦೦೭ರಂದು ಐಸಿಸಿ ವರ್ಲ್ಡ್ ಟಿ ಟ್ವೆಂಟಿ ಟ್ರೋಫಿಯನ್ನು ಎತ್ತಿಹಿಡಿದಿತ್ತು. ೨೦೧೧ರಂದು ವಿಶ್ವಕಪ್ ತಂದುಕೊಟ್ಟ ಯಶಸ್ವಿ ನಾಯಕರಾದರು. ಎಂಎಸ್ ಧೋನಿ ತಮ್ಮ ಚಾಣಾಕ್ಷತನದಿಂದ ಬೌಲರ್ ಗಳಿಗೆ ಸಲಹೆ ನೀಡುವ ಮೂಲಕ ಎಂತಹ ಘಟಾನುಘಟಿ ಬ್ಯಾಟ್ಸ್ಮನ್ ಗಳಿಗೆ ಪೆವಿಲಿಯನ್ ಹಾದಿ ತೋರಿಸಿದ್ದಾರೆ.

ಎಂಎಸ್ ಧೋನಿ ಕ್ಯಾಪ್ಟನ್ ಶಿಪ್ ನಲ್ಲಿ ೨೦೧೩ರಂದು ಚಾಂಪಿಯನ್ಸ್ ಟ್ರೋಫಿಯನ್ನು ಗೆಲ್ಲಲಾಗಿದೆ. ಹಲವಾರು ಸಾಧನೆಗಳಿಗೆ ಎಂಎಸ್ ಧೋನಿ ಪಾತ್ರರಾಗಿದ್ದಾರೆ. ಎಂಎಸ್ ಧೋನಿ ೨೦೨೦ ಆಗಸ್ಟ್ ೧೫ರಂದು ಅಂತರರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದರು. ಐಪಿಎಲ್ನಲ್ಲಿ ಚೆನ್ನೈ ಸೂಪರ್ಕಿಂಗ್ಸ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಇಂದು ಸಾಮಾಜಿಕ ಜಾಲತಾಣದಲ್ಲಿ ಅವರ ಅಭಿಮಾನಿಗಳಿಂದ, ಕ್ರಿಕೆಟಿಗರಿಂದ ಹಾಗೂ ಸಿನಿ ತಾರೆಯರಿಂದ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ.