ರಾಜ್ಯದ ೨-೩ ಸಂಸದರಿಗೆ  ಕೇಂದ್ರ ಸಂಪುಟದಲ್ಲಿ ಸ್ಥಾನ

Murugesh Nirani

ರಾಜ್ಯದ ೨-೩ ಸಂಸದರಿಗೆ   ಕೇಂದ್ರ ಸಂಪುಟದಲ್ಲಿ ಸ್ಥಾನ

ಬೆಂಗಳೂರು: ರಾಜ್ಯದ - ಸಂಸದರಿಗೆ ಕೇಂದ್ರ ಸಂಪುಟದಲ್ಲಿ ಸ್ಥಾನ ಸಿಗುವುದು ಖಚಿತವಾಗಿದೆ ಎಂದು ಗಣಿ ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಜಾತಿ ಲೆಕ್ಕಾಚಾರದ ಪ್ರಕಾರ ಲಿಂಗಾಯಿತರಿಗೆ ಒಂದು ಸ್ಥಾನ, ಪರಿಶಿಷ್ಟ ಜಾತಿಗೆ ಒಂದು ಸಚಿವ ಸ್ಥಾನ ಹಾಗೂ ಮತ್ತೊಂದು ಸ್ಥಾನ ಯಾರಿಗೆ ಕೊಡುತ್ತಾರೆ ನೋಡಬೇಕು ಎಂದರು.

ಒಟ್ಟಾರೆ ಬಹುನಿರೀಕ್ಷಿತ ಕೇಂದ್ರ ಸಂಪುಟ ಪುನಾರಚನೆ ಇಂದೇ ನಡೆಯಲಿದ್ದು, ರಾಜ್ಯದ ಸಂಸದರು ದೆಹಲಿಯಲ್ಲಿ ಬೀಡು ಬಿಟ್ಟಿದ್ದು ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.