ಎಲ್ಲರ ಚಿತ್ತ ನಮೋ ಸಂಪುಟದತ್ತ

Narendra Modi

ಎಲ್ಲರ ಚಿತ್ತ ನಮೋ ಸಂಪುಟದತ್ತ

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಸಂಪುಟಕ್ಕೆ ಕೌಂಟ್ಡೌನ್ ಶುರುವಾಗಿದೆ. ಕೇಂದ್ರದಲ್ಲಿ ೨ನೇ ಇನ್ನಿಂಗ್ಸ್ನಲ್ಲಿ ಮೋದಿ ಕ್ಯಾಬಿನೆಟ್ಗೆ ಇಂದು ಹೊಸ ಮುಖಗಳ ಸೇರ್ಪಡೆಯಾಗಲಿದೆ. ಎಲ್ಲಾ ಆಯಾಮಗಳಲ್ಲಿ ನೂತನ ಸಚಿವರನ್ನು ಆಯ್ಕೆ ಮಾಡಲಾಗಿದ್ದು ಇಂದು ಬೆಳಗ್ಗೆ ೧೧.೩೦ಕ್ಕೆ ನಿಗದಿಯಾಗಿದ್ದ ಕೇಂದ್ರ ಸಂಪುಟ ಸಭೆ ರದ್ದಾಗಿದೆ.

ಹಿಂದೆ ಸಂಜೆ .೩೦ಕ್ಕೆ ಪ್ರಮಾಣವಚನ ನಡೆಯಲಿದೆ ಎಂದು ಹೇಳಲಾಗಿತ್ತು. ಆದ್ರೆ ಸಭೆ ರದ್ದಾಗಿರುವ ಕಾರಣ ಪ್ರಮಾಣವಚನ ಕಾರ್ಯಕ್ರಮ ವಿಳಂಬವಾಗುವ ಸಾಧ್ಯತೆ ಇದೆ. ಮೋದಿ ಸಂಪುಟದಲ್ಲಿ ಕರ್ನಾಟಕದಿಂದ ಯಾರಿಗೆಲ್ಲಾ ಸ್ಥಾನ ಸಿಗುತ್ತೆ ಅನ್ನೋದೇ ಸದ್ಯ ಕುತೂಹಲಕರವಾಗಿದೆ.

ಮೋದಿ ಸಂಪುಟ ಪುನಾರಚನೆಗೆ ಕೌಂಟ್ಡೌನ್ ಶುರುವಾಗಿದೆ. ಎರಡನೇ ಬಾರಿಗೆ ಅಧಿಕಾರಕ್ಕೇರಿದ ವರ್ಷಗಳ ಬಳಿಕ ಸಂಪುಟಕ್ಕೆ ಮೋದಿ ಮುಂದಾಗಿದ್ದಾರೆ. ೨೦೨೨ರ ಪಂಚರಾಜ್ಯ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಯುವಮುಖಗಳು ಹಾಗೂ ಸಮುದಾಯಗಳ ನಾಯಕರನ್ನೇ ಪುನಾರಚನೆಯಲ್ಲಿ ಪರಿಗಣಿಸಲಾಗಿದೆ. ನಡುವೆ ಕರ್ನಾಟಕದಿಂದಲೂ ಮೂವರು ಸಂಸದರಿಗೆ ಕೇಂದ್ರದಿಂದ ಬುಲಾವ್ ಬಂದಿದ್ದು, ಈಗಾಗಲೇ ಮೂವರು ದೆಹಲಿಗೆ ದೌಡಾಯಿಸಿದ್ದಾರೆ.

ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಸೇರಿರೋ ಉಮೇಶ್ ಜಾಧವ್, ಕಲಬುರಗಿ ಕ್ಷೇತ್ರದಲ್ಲಿ ಖರ್ಗೆ ವಿರುದ್ಧ ಭರ್ಜರಿ ಜಯಭೇರಿ ಬಾರಿಸಿ ಸಂಸದರಾಗಿದ್ದಾರೆ. ಬಂಜಾರ ಜಾತಿಗೆ ಸೇರಿರೋ ಉಮೇಶ್ ಜಾಧವ್ಗೆ ಮಂತ್ರಿಭಾಗ್ಯ ಒಲಿದು ಬಂದಿದೆ ಎನ್ನಲಾಗಿದೆ.

ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಸಂಸದ ಆನೇಕಲ್ ನಾರಾಯಣಸ್ವಾಮಿಗೂ ದೆಹಲಿ ಬುಲಾವ್ ಬಂದಿದೆ. ದಲಿತ ಸಮುದಾಯಕ್ಕೆ ಸೇರಿರೋ ನಾರಾಯಣಸ್ವಾಮಿಗೂ ಮೋದಿ ಸಂಪುಟದಲ್ಲಿ ಮಂತ್ರಿಯಾಗೋ ಚಾನ್ಸ್ ಸಿಕ್ಕಿದೆ ಎನ್ನಲಾಗಿದೆ. ಇನ್ನು ಬಾರಿ ಸಂಸದರಾಗಿ ಆಯ್ಕೆಯಾಗಿರೋ ವಿಜಯಪುರ ಸಂಸದ ರಮೇಶ್ ಜಿಗಜಿಣಗಿಗೂ ಹೈಕಮಾಂಡ್ ಬುಲಾವ್ ಬಂದಿದೆ. ದಲಿತ ಸಮುದಾಯಕ್ಕೆ ಸೇರಿರೋ ರಮೇಶ್ ಜಿಗಜಿಣಗಿ ಮತ್ತೆ ಕೇಂದ್ರ ಸಚಿವರಾಗಲಿದ್ದಾರೆ ಎನ್ನಲಾಗಿದೆ. ಹೀಗೆ ರಾಜ್ಯದ ಮೂವರು ದಲಿತ ಸಮುದಾಯದ ಸಂಸದರಿಗೆ ದೆಹಲಿ ಬುಲಾವ್ ಬಂದಿದೆ. ಮೂವರು ಸಂಸದರು ಈಗಾಗಲೇ ದೆಹಲಿಗೆ ದೌಡಾಯಿಸಿದ್ದು, ಮೂವರ ಪೈಕಿ ಯಾರು ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಅನ್ನೋದೇ ಕುತೂಹಲ.

ಇಂದು ಸಂಜೆ ಕೇಂದ್ರ ಸಚಿವ ಸಂಪುಟ ವಿಸ್ತರಣೆ ನಡೆಯುತ್ತಿದ್ದು, ಕೆಲ ಹಿರಿಯ ಸಚಿವರನ್ನು ಕೈಬಿಟ್ಟು ಹೊಸ ಮುಖಗಳಿಗೆ ಮಣೆ ಹಾಕಲಾಗುತ್ತದೆ ಎಂಬ ಮಾತುಗಳು ಕೇಳಿಬರುತ್ತಿವೆ. ಕರ್ನಾಟಕದ ಇಬ್ಬರು ಅಥವಾ ಮೂವರಿಗೆ ಸಚಿವ ಸ್ಥಾನ ಸಿಗಲಿದೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಪುಷ್ಟಿ ನೀಡುವಂತೆ ಸಂಸದ .ನಾರಾಯಣಸ್ವಾಮಿ ತಮ್ಮ ಕುಟುಂಬದೊಂದಿಗೆ ನವದೆಹಲಿಗೆ ದೌಡಾಯಿಸಿದ್ದು, ಸಚಿವ ಸ್ಥಾನ ನೀಡುವ ಕುರಿತಂತೆ ಮಾಹಿತಿ ಸಿಕ್ಕ ಹಿನ್ನಲೆಯಲ್ಲಿ ನಾರಾಯಣ ಸ್ವಾಮಿ ದೆಹಲಿಗೆ ತೆರಳಿದ್ದಾರೆ ಎನ್ನಲಾಗುತ್ತಿದೆ. ಇದರ ಮಧ್ಯೆ ಇಂದು . ನಾರಾಯಣ ಸ್ವಾಮಿ ಹಾಗೂ ಶೋಭಾ ಕರಂದ್ಲಾಜೆ ಪ್ರಧಾನಿ ನರೇಂದ್ರ ಮೋದಿಯವರ ನಿವಾಸಕ್ಕೆ ಭೇಟಿ ನೀಡಿದ್ದು, ಇಬ್ಬರಿಗೂ ಸಚಿವ ಸ್ಥಾನ ಖಚಿತವೆಂದು ಹೇಳಲಾಗುತ್ತಿದೆ.