‘ಹರಿಕಥೆ ಅಲ್ಲ ಗಿರಿಕಥೆ ಹೇಳುವ ರಿಷಬ್

Rishab Shetty

‘ಹರಿಕಥೆ ಅಲ್ಲ ಗಿರಿಕಥೆ ಹೇಳುವ ರಿಷಬ್

ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಯಲ್ಲಿ ಇನ್ಸ್‌ಪೆಕ್ಟರ್ ಆಗಿದ್ದ ರಿಷಬ್ ಶೆಟ್ಟಿ ಅವರ ‘ಅವನೇ ಶ್ರೀಮನ್ನಾರಾಯಣ’ ಚಿತ್ರದಲ್ಲಿ ಕೌಬಾಯ್ ಕೃಷ್ಣನ ಪಾತ್ರದಲ್ಲಿ ಒಂಚೂರು ಮಾತ್ರ ಎಂಬಂತೆ ಮುಖ ತೋರಿಸಿದ್ದರು.
ಕಥಾಸಂಗಮ’ದಲ್ಲಿ ಭಿಕ್ಷುಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದ  ಅವರು ನಾಯಕನಾಗಿ ಅಭಿನಯಿಸಲಿರುವ ಹೊಸ ಸಿನಿಮಾ
ಗಿರಿಕೃಷ್ಣ ಅವರು ನಿರ್ದೇಶಿಸುತ್ತಿರುವ ‘ಹರಿಕಥೆ ಅಲ್ಲ ಗಿರಿಕಥೆ’
ಈ ಚಿತ್ರದಲ್ಲಿ ರಿಷಬ್ ನಾಯಕ ನಟನ ಪಾತ್ರ. ಇದು ಹಾಸ್ಯದ ಹಳಿಯ ಮೇಲೆ ಸಾಗುವ, ಪಕ್ಕಾ ಮನರಂಜನೆಯ ಸಿನಿಮಾವಾಗಿದೆ.
‘ಇಂದಿನ ತಲೆಮಾರಿನ ಯುವಕರ  ಹೆಣಗಾಟಗಳು, ಹುಡುಗಾಟಗಳನ್ನು ಹಾಸ್ಯಮಯವಾಗಿ ಹೇಳುವ ಸಿನಿಮಾ ಇದಾಗಿದೆ.
ನಿರ್ದೇಶಕ ಗಿರಿಕೃಷ್ಣ ಅವರು ಕಿರಿಕ್ ಪಾರ್ಟಿ ಸಿನಿಮಾದಲ್ಲಿ ಒಂದು ಪಾತ್ರ ನಿಭಾಯಿಸಿದ್ದ ಅನುಭವ ಹೊಂದಿದ್ದಾರೆ.
ಗಿರಿಕೃಷ್ಣ ಅವರು ರಿಷಬ್ ಅವರಲ್ಲಿ ಈ ಚಿತ್ರದ ಕಥೆಯನ್ನು ಎರಡು ವರ್ಷಗಳ ಹಿಂದೆಯೇ ಹೇಳಿದ್ದರಂತೆ. ಅಂದಿನಿಂದಲೂ ಇದನ್ನು ಸಿನಿಮಾ ಮಾಡಬೇಕು ಎಂಬ ಆಲೋಚನೆ ಇಬ್ಬರಲ್ಲಿಯೂ ಇತ್ತು. ‘ಒಳ್ಳೆಯ ಮನರಂಜನೆಯ ವಸ್ತು ಈ ಸಿನಿಮಾದಲ್ಲಿ ಇರಲಿದೆ. ಗಿರಿಕೃಷ್ಣ ಅವರು ಕಥೆ ಹಾಗೂ ಪಾತ್ರವನ್ನು ಸೃಷ್ಟಿಸಿದ ಬಗೆ ನನಗೆ ಇಷ್ಟವಾಯಿತು. ಹಾಗಾಗಿ, ಈ ಪಾತ್ರವನ್ನು ಒಪ್ಪಿಕೊಂಡೆ’ ಎನ್ನುತ್ತಾರೆ ರಿಷಬ್.
‘ನಾನು ನಿಭಾಯಿಸಲಿರುವುದು ಒಬ್ಬ ತೀರಾ ಸಾಮಾನ್ಯ ವ್ಯಕ್ತಿಯ ಪಾತ್ರವನ್ನು. ಈ ಚಿತ್ರದಲ್ಲಿ ಇರುವಂಥ ಕಥೆಯ ಸಿನಿಮಾಗಳು, ಇಂತಹ ಪಾತ್ರಗಳು ನನಗೆ ಬಹಳ ಇಷ್ಟ. ನಾನು ಇದರಲ್ಲಿ ಅಭಿನಯಿಸಲು ಒಪ್ಪಿಕೊಳ್ಳುವುದಕ್ಕೆ ಇದೂ ಒಂದು ಕಾರಣ’ ಎನ್ನುತ್ತಾರೆ.
ಈ ಚಿತ್ರದಲ್ಲಿ ಇರುವುದು ಸಮಕಾಲೀನ ಕಥೆಯಾಗಿದ್ದು ಸಿನಿಮಾ ಚಿತ್ರೀಕರಣವು ಬೆಂಗಳೂರು ಸುತ್ತಮುತ್ತ ನಡೆಯಲಿದೆ.
ರಾಜ್ ಬಿ. ಶೆಟ್ಟಿ ನಿರ್ದೇಶನದ ‘ಗರುಡ ಗಮನ ವೃಷಭ ವಾಹನ’ ಚಿತ್ರದಲ್ಲಿ ರಿಷಬ್ ಅವರು ಖಳನ ಪಾತ್ರವನ್ನು ನಿಭಾಯಿಸ ಲಿದ್ದಾರೆ.