ಕರ್ನಾಟಕದ ಗಡಿ ಭಾಗಕ್ಕೆ ಐಜಿಪಿ ಸೀಮಂತ್ ಕುಮಾರ್ ಸಿಂಗ್ ಭೇಟಿ..

ಕರ್ನಾಟಕದ ಗಡಿ ಭಾಗಕ್ಕೆ ಐಜಿಪಿ ಸೀಮಂತ್ ಕುಮಾರ್ ಸಿಂಗ್ ಭೇಟಿ..
ಸೀಮಂತ್ ಕುಮಾರ್ ಸಿಂಗ್ ಭೇಟಿ..

ಆನೇಕಲ್ : ಕೊರೊನಾ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಬೆಂಗಳೂರು ಗ್ರಾಮಾಂತರ ಪೊಲೀಸರಿಗೆ ಐಜಿಪಿ ಸೀಮಂತ್ ಕುಮಾರ್ ಸಿಂಗ್ ಸೂಚನೆ ನೀಡಿದ್ದಾರೆ.
ಇಂದು ಕರ್ನಾಟಕದ ಗಡಿ ಆನೇಕಲ್ ತಾಲೂಕಿನ ಅತ್ತಿಬೆಲೆಗೆ ಭೇಟಿ ಪರಿಶೀಲನೆ ನಡೆಸಿದ ಅವರು, ಗಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸರ ಜೊತೆ ಚರ್ಚೆ ನಡೆಸಿದರು.
ಈ ವೇಳೆ ತಮಿಳುನಾಡಿನಿಂದ ಬರುವವರನ್ನು ಪರಿಶೀಲನೆ ಮಾಡಿ ಒಳ ಬಿಡುವಂತೆ ಸೂಚನೆ ನೀಡಿದರು.
ಇನ್ನು ಪೊಲೀಸರ ಆರೋಗ್ಯದ ಕಾಳಜಿ ನಮ್ಮ ಆದ್ಯತೆಯಾಗಿದೆ.ಜೊತೆಗೆ ಸಿಬ್ಬಂದಿ ಕೊರತೆ ಇದ್ದರೆ ಕ್ರಮ ಕೈಗೊಳ್ಳಲು ಚರ್ಚೆ ಮಾಡಲಾಗಿದೆ.
ಅಲ್ಲದೆ, ಎಸ್ಪಿ ಹಾಗೂ ಪೊಲೀಸ್ ಅಧಿಕಾರಿಗಳ ಜೊತೆ ಚರ್ಚಿಸಿ ಸಮಸ್ಯೆ ಬಗೆಹರಿಸಲಾಗುವುದು ಎಂದರು.