ಇಂದಿನಿಂದ ವಿಶೇಷ ರೈಲುಗಳ ಸಂಚಾರ

Special Trian

ಇಂದಿನಿಂದ ವಿಶೇಷ ರೈಲುಗಳ ಸಂಚಾರ

ಬೆಂಗಳೂರು : ತಮಿಳುನಾಡು, ಕರ್ನಾಟಕ ಮತ್ತು ಕೇರಳದಲ್ಲಿ ೩ ಜೋಡಿ ರೈಲುಗಳ ಸಂಚಾರವನ್ನು ವಿಸ್ತರಿಸಲು ನೈಋತ್ಯ ರೈಲ್ವೆ ನಿರ್ಧರಿಸಿದೆ.
ಕೊರೊನಾ ವೈರಸ್ ಸಾಂಕ್ರಾಮಿಕದಿಂದಾಗಿ ಹಲವಾರು ರೈಲುಗಳ ಕಾರ್ಯಾಚರಣೆಯನ್ನು ನಿಲ್ಲಿಸಲಾಯಿತು. ಮಾರಣಾಂತಿಕ ವೈರಸ್ ಹರಡುವುದನ್ನು ತಡೆಯಲು ಏಪ್ರಿಲ್ ನಲ್ಲಿ ವಿಧಿಸಲಾದ ಕೋವಿಡ್-೧೯ ನಿರ್ಬಂಧಗಳಲ್ಲಿ ಸಡಿಲಿಕೆಯನ್ನು ವಿವಿಧ ರಾಜ್ಯಗಳು ಘೋಷಿಸಿವೆ. ಈ ಹಿನ್ನೆಲೆಯಲ್ಲಿ ತಮಿಳುನಾಡು, ಕರ್ನಾಟಕ ಮತ್ತು ಕೇರಳದಲ್ಲಿ ೩ ಜೋಡಿ ರೈಲುಗಳ ಸಂಚಾರವನ್ನು ವಿಸ್ತರಿಸಿದೆ.
ಚೆನ್ನೈ ಸೆಂಟ್ರಲ್- ಮೈಸೂರು ಎಕ್ಸ್‌ಪ್ರೆಸ್ ವಿಶೇಷ, ೦೬೦೮೧ ಚೆನ್ನೈ ಸೆಂಟ್ರಲ್-ಮೈಸೂರು ಎಕ್ಸ್‌ಪ್ರೆಸ್ ವಿಶೇಷ ಜು.೫ ರಿಂದ ಮುಂದಿನ ಸೂಚನೆಯವರೆಗೆ ಚಲಿಸುತ್ತದೆ. ೦೬೦೮೨ ಮೈಸೂರು-ಚೆನ್ನೈ ಸೆಂಟ್ರಲ್ ಎಕ್ಸ್‌ಪ್ರೆಸ್ ವಿಶೇಷ ಜು.೫ ರಿಂದ ಚಲಿಸುತ್ತದೆ. ಕೊಚುವೇಲಿ-ಬಾಣಸವಾಡಿ ಎಕ್ಸ್‌ಪ್ರೆಸ್ ವಿಶೇಷ. ೦೬೩೧೯ ಕೊಚುವೇಲಿ-ಬಾಣಸವಾಡಿ ಎಕ್ಸ್ ಪ್ರೆಸ್ ವಿಶೇಷ ಜು.೮ ರಿಂದ ಚಲಿಸುತ್ತದೆ, ೦೬೩೨೦ ಬಾಣಸವಾಡಿ-ಕೊಚುವೇಲಿ ಎಕ್ಸ್ ಪ್ರೆಸ್ ವಿಶೇಷ ಜುಲೈ ೯ ರಿಂದ ಚಾಲನೆ, ಎರ್ನಾಕುಲಂ ಜೆಎನ್-ಬಾಣಸವಾಡಿ ಎಕ್ಸ್ ಪ್ರೆಸ್ ವಿಶೇಷ, ೦೬೧೨೯ ಎರ್ನಾಕುಲಂ ಜೆಎನ್-ಬಾಣಸವಾಡಿ ಎಕ್ಸ್ ಪ್ರೆಸ್ ವಿಶೇಷ ಜು.೫ ರಿಂದ ಚಲಿಸುತ್ತದೆ, ೦೬೧೩೦ ಬಾಣಸವಾಡಿ-ಎರ್ನಾಕುಲಂ ಜೆಎನ್ ಎಕ್ಸ್‌ಪ್ರೆಸ್ ವಿಶೇಷ ಜು.೬ ರಿಂದ ಕಾರ್ಯನಿರ್ವಹಿಸಲಿದೆ.