ಇಂದಿನಿಂದ ಭಕ್ತರಿಗೆ ದೇವರ ದರ್ಶನ ಭಾಗ್ಯ

Temple Open

ಇಂದಿನಿಂದ ಭಕ್ತರಿಗೆ ದೇವರ ದರ್ಶನ ಭಾಗ್ಯ

ಬೆಂಗಳೂರು: ಕೊರೊನಾ ಮಹಾಮಾರಿಯ ಭೀತಿಯ ಹಿನ್ನೆಲೆಯಲ್ಲಿ ಸರಿಸುಮಾರು ಎರಡೂವರೆ ತಿಂಗಳು ಕಾಲ ಬಾಗಿಲು ಮುಚ್ಚಿದ ಮಂದಿರಗಳು ಇಂದಿನಿಂದ ರಾಜ್ಯಾದಂತ್ಯ ತೆರೆದು ಭಕ್ತರಿಗೆ ದರ್ಶನ ಭಾಗ್ಯ ಕಲ್ಪಿಸಲಾಗಿದೆ. ಮಂದಿರಗಳನ್ನು ವಿಶೇಷ ಹೂಗಳಿಂದ ಅಲಂಕಾರ ಮಾಡಲಾಗಿತ್ತು.
ಬೆಂಗಳೂರು ನಗರದ ಶ್ರೀಕಾಡು ಮಲ್ಲೇಶ್ವರ, ಗವಿ ಗಂಗಾಧರೇಶ್ವರ, ದೊಡ್ಡಣ ಗಣಪತಿ, ಗಾಳಿ ಆಂಜನೇಯ ಸ್ವಾಮಿ ದೇಗುಲ ಸೇರಿದಂತೆ ಇತರೆ ಮಂದಿರಗಳಲ್ಲಿ ಬೆಳಗ್ಗೆ ೭ ಗಂಟೆಯಿಂದ ಪೂಜಾ ಕಾರ್ಯಗಳು ಆರಂಭಗೊಂಡಿದ್ದು, ಮೊದಲ ದಿನವೇ ದೇವಸ್ಥಾನಕ್ಕೆ ಭಕ್ತರ ದಂಡು ಹರಿದು ಬಂದಿದೆ. ಇನ್ನು ದೇವಾಲಯದಲ್ಲಿ ತೀರ್ಥ ಪ್ರಸಾದ ಹಾಗೂ ಅನ್ನ ಪ್ರಸಾದ ವಿತರಣೆಗೆ ನಿರ್ಭಂಧವಿದ್ದು, ದೇವಾಲಯದ ಸಿಬ್ಬಂದಿ ಕಟ್ಟುನಿಟ್ಟಾಗಿ ಕೊರೊನಾ ಮುಂಜಾಗ್ರತ ಕ್ರಮಗಳನ್ನು ಪಾಲಿಸುತ್ತಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ದೇವಾಲಯ ಶ್ರೀ ಮಂಜುನಾಥ ಸ್ವಾಮಿಯ ದೇವಾಲಯ, ಸರ್ಕಾರದ ಮಾರ್ಗಸೂಚಿ ಕ್ರಮದಂತೆ ಇಂದಿನಿಂದ ಭಕ್ತರ ದರ್ಶನಕ್ಕಾಗಿ ತೆರೆದುಕೊಳ್ಳಲಿದೆ. ಧರ್ಮಸ್ಥಳಕ್ಕೆ ಬರುವಂತೆ ಭಕ್ತರು ಕೊರೊನಾ ಮುಂಜಾಗ್ರತಾ ಕ್ರಮವಾದಂತ ಮಾಸ್ಕ್, ದೈಹಿಕ ಅಂತರ ಹಾಗೂ ಸ್ವಚ್ಛತೆಯನ್ನು ಕಾಯ್ದುಕೊಳ್ಳಬೇಕು. ಈಗಾಗಲೇ ದೇವಾಲಯವನ್ನು ಸ್ಯಾನಿಟೈಸ್ ಮಾಡಲಾಗಿದ್ದು, ಕೊರೊನಾ ತಡೆಯ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ವಹಿಸಿ, ಶ್ರೀ ಕ್ಷೇತ್ರ ಧರ್ಮಸ್ಥಳ ಭಕ್ತರದ ದರ್ಶನಕ್ಕೆ ತೆರೆಯಲಾಗುತ್ತಿದೆ ಎಂಬುದಾಗಿ ತಿಳಿಸಿದೆ.
ಇದೇ ವೇಳೆ ತಾಲೂಕಿನ ಬಯಲು ಆಲಯ ಕೊಕ್ಕಡ ಶ್ರೀ ಸೌತಡ್ಕ ಮಹಾಗಣಪತಿ ದೇವಸ್ಥಾನ, ಸುರ್ಯ ಶ್ರೀ ಸದಾಶಿವರುದ್ರ ದೇವಸ್ಥಾನ, ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನ, ಕನ್ಯಾಡಿ ಶ್ರೀ ರಾಮಕ್ಷೇತ್ರ ಸೇರಿದಂತೆ ಭಕ್ತರು ಕಂಡುಬಂದರು
ಐತಿಹಾಸಿಕ ಹಂಪಿ ವಿರೂಪಾಕ್ಷೇಶ್ವರ, ಸುಕ್ಷೇತ್ರ ಮೈಲಾರ, ಉಜ್ಜೈನಿ ಶ್ರೀ ಮರುಳಸಿದ್ದೇಶ್ವರ ದೇವಸ್ಥಾನದಲ್ಲಿ ಭಕ್ತರು ದರ್ಶನ ಪಡೆದರು. ತುಂಗಭದ್ರಾ ನದಿಯಲ್ಲಿ ಸ್ನಾನ ಮಾಡಿ, ದೇವರ ದರ್ಶನ ಪಡೆದರು. ಎರಡು ತಿಂಗಳು ನಂತರ ದೇವಾಲಯ ತೆರೆದ ಹಿನ್ನೆಲೆಯಲ್ಲಿ ದೇವಸ್ಥಾನ ಎದುರು ಮಹಿಳೆಯರು ಬಣ್ಣಬಣ್ಣದ ರಂಗೋಲಿ ಬರೆದರು.
ಬಳ್ಳಾರಿಯ ಕನಕ ದುರ್ಗಮ್ಮ, ಕಲಬುರಗಿಯ ಪ್ರಸಿದ್ಧ ಶ್ರೀ ಶರಣಬಸವೇಶ್ವರ ಹಾಗೂ ವಿಜಯನಗರ ಜಿಲ್ಲೆಯ ಐತಿಹಾಸಿಕ ಹಂಪಿ ವಿರೂಪಾಕ್ಷೇಶ್ವರ, ಕಲಬುರಗಿಯ ಪ್ರಸಿದ್ಧ ಶ್ರೀ ಶರಣಬಸವೇಶ್ವರ ದೇವಸ್ಥಾನದ ಬಾಗಿಲು ತೆರೆಯಲಾಗಿದ್ದು, ಸೋಮವಾರವಾಗಿದ್ದರಿಂದ ಭಕ್ತರ ದಂಡೇ ದೇವಸ್ಥಾನದತ್ತ ಹರಿದುಬರುತ್ತಿದೆ.
ಓಪನ್ಬಳ್ಳಾರಿಯ ಅಧಿದೇವತೆ ಕನಕ ದುರ್ಗಮ್ಮಗೆ ಹೂವು ಮತ್ತು ನಿಂಬೆಹಣ್ಣಿನ ಹಾರ ಹಾಕಿ, ವಿಶೇಷ ಅಲಂಕಾರ ಮಾಡುವ ಮೂಲಕ ಪೂಜೆ ಸಲ್ಲಿಸಲಾಯಿತು.
 ಜೊತೆಗೆ ಇಂದು ಚಾರ್ಟರ್ಡ್ ಅಕೌಂಟೆಂಟ್ (ಸಿಎ) ಅಂತಿಮ ವರ್ಷದ ಪರೀಕ್ಷೆಯಾದ್ದರಿಂದ ವಿದ್ಯಾರ್ಥಿಗಳು ತಮ್ಮ ಪರೀಕ್ಷಾ ಅನುಮತಿ ಪತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿದರು. ಸರ್ಕಾರದ ಮಾರ್ಗಸೂಚಿ ಅನ್ವಯ ಕ್ಷೇತ್ರದಲ್ಲಿ ಸ್ಯಾನಿಟೈಸರ್ ಬಳಕೆ, ಮಾಸ್ಕ್, ಸಾಮಾಜಿಕ ಅಂತರ ಕಡ್ಡಾಯಗೊಳಿಸಲಾಗಿದೆ. ಕೇವಲ ದೇವಿಯ ದರ್ಶನಕ್ಕೆ ಮಾತ್ರ ಅವಕಾಶವಿದ್ದು, ತೆಂಗಿನಕಾಯಿ ಒಡೆಯೋದು ಸೇರಿದಂತೆ ಇನ್ನಿತರೆ ಸೇವೆಗಳಿಗೆ ಅವಕಾಶ ಇಲ್ಲವೆಂದು ದೇಗುಲದ ಧರ್ಮಕರ್ತ ಪಿ.ಗಾದೆಪ್ಪ ತಿಳಿಸಿದ್ದಾರೆ.